ಈ ಸಲ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡ್ತಾರೆ ಎಂಬುವುದು ಪಕ್ಕಾ ಆಗ್ತಿದೆ.
ಇದು ಸ್ವಲ್ಪ ನಿರೀಕ್ಷಿತವೇ ಅನ್ನಬಹುದಾದ ಹಳೇ ಸುದ್ದಿ. ನಿರೀಕ್ಷಿತ ಯಾಕೆ ಅಂದರೆ, ಅವರ ಅಮ್ಮ ಸೋನಿಯಾ ಅವರು ತಾವು ಎಲೆಕ್ಷನ್ನಿನಿಂದ ರಿಟೈರ್ ಅಂತ ಈಗಾಗಲೇ ಅನೌನ್ಸ್ ಮಾಡಿ ರಾಜ್ಯಸಭೆ ಸೇರಿದ್ದರಿಂದ.
2004ರಿಂದ ರಾಯ್ ಬರೇಲಿಯನ್ನು ಪ್ರತಿನಿಧಿಸುತ್ತಿದ್ದವರು, ಸೋನಿಯಾ. ಹಾಗಾಗಿ, ಅವರ ಜಾಗಕ್ಕೆ ಪ್ರಿಯಾಂಕಾ ಹೆಸರು ಕೇಳಿಬಂದಿದೆ.
ಬಟ್ ಆ ಹಳೇ ಸುದ್ದಿ ಬಿಡಿ. ಹೊಸ excitement ಏನು ಅಂದರೆ, ಬಿಜೆಪಿ ಹೂಡುತ್ತಿರುವ ಹೊಸ ತಂತ್ರ. ಕಂಪ್ಲೀಟ್ಲೀ unexpected ತಂತ್ರ ಇದು.
ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ ಬರೇಲಿ ಕಾಂಗ್ರೆಸ್ ನ ಭದ್ರಕೋಟೆಗಳಾಗಿದ್ದಂಥವು. ಆ ಪೈಕಿ ಈಗಾಗಲೇ ಸ್ಮೃತಿ ಇರಾನಿಯವರು ಅಮೇಥಿಯನ್ನು ಗೆದ್ದುಕೊಂಡು ಕಾಂಗ್ರೆಸ್ಸಿನ ಚಿರ ರಾಜಕುಮಾರನನ್ನು ಕೇರಳಕ್ಕೆ ಕಳಿಸಿಯಾಗಿದೆ. ಈಗ ರಾಜಕುಮಾರಿಯ ಸರದಿ! ಕಾಂಗ್ರೆಸ್ ನ ಫ್ಯೂಚರ್ ಪಿಎಂ ಕ್ಯಾಂಡಿಟೇಟ್ ಎಂದೇ ಬಿಂಬಿತರಾಗಿರುವ ಪ್ರಿಯಾಂಕಾ ಗಾಂಧಿ ವಿರುದ್ಧ ಬಿಜೆಪಿ ಕಣಕ್ಕಿಳಿಸಲು ಹೊರಟಿರುವುದು, ಫೈರ್ ಬ್ರಾಂಡ್ ನೂಪುರ್ ಶರ್ಮಾರನ್ನ! ಆಫ್ ಕೋರ್ಸ್ ಇದು ಇನ್ನೂ ಅಧಿಕೃತವಾಗಿಲ್ಲ. ಜಸ್ಟ್, ಪಕ್ಷದೊಳಗಿನ ಸುದ್ದಿಪಕ್ಷಿಗಳ ಚಿಲಿಪಿಲಿಯಿಂದ ಹೊರಬಿದ್ದಿರುವ ವದಂತಿಯಿದು. ಬಟ್, ಈ ಬಗ್ಗೆ ಬಿಜೆಪಿ ಗಂಭೀರವಾಗಿ ಯೋಚಿಸುತ್ತಿರುವುದಂತೂ ನಿಜ ಅನ್ನುವ ವರದಿಗಳು ಬಂದಿವೆ.
ಈ ನೂಪುರ್ ಶರ್ಮಾ 2015 ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ, ಠಕ್ಕರ್ ಕೊಟ್ಟು ಸೋತಿದ್ದರೂ, ನಿರಂತರವಾಗಿ ತಮ್ಮ ಮೊನಚು ಮಾತಿನ ಕಾರಣಕ್ಕಾಗಿ ಸುದ್ದಿಯಲ್ಲಿದ್ದವರು. ಜೊತೆಗೆ ಅಪ್ಪಟ ಹೋರಾಟಗಾರ್ತಿ ಕೂಡ. ದೆಹಲಿ ಯೂನಿವರ್ಸಿಟಿಯಲ್ಲಿ ಬಹುಕಾಲದ ನಂತರ ಎಬಿವಿಪಿಗೆ ಮೊತ್ತಮೊದಲ ಗೆಲುವು ತಂದುಕೊಟ್ಟಿದ್ದವರು. ಪ್ರಖರ ಹಿಂದುತ್ವವಾದಿ. ಆ ಕಾರಣಕ್ಕೇ, ಅದೊಮ್ಮೆ ಟೀವಿ ಚಾನಲ್ಲಿನ ಜಿಬೇಟಿನಲ್ಲಿ ಹದತಪ್ಪಿ ಮಾತಾಡಿ ಅನಿವಾರ್ಯವಾಗಿ ತೆರೆಮರೆಗೆ ಸರಿದಿದ್ದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಅವರ ಮಾತಿನಿಂದ ಮುಜುಗರ ಅನುಭವಿಸಬೇಕಾಗಿ ಬಂದಿತ್ತು.
ಆದರೆ, ಈಗ ಬರುತ್ತಿರುವ ವರದಿಗಳನ್ನು ನೋಡಿದರೆ, ಅವರು ಮತ್ತೆ ಪಕ್ಷದ ಒಲವು ಪಡೆದಿರುವ ಹಾಗೆ ಕಾಣುತ್ತದೆ. ಪ್ರಿಯಾಂಕಾ ಗಾಂಧಿಯವರ ನಿದ್ದೆ ಕೆಡಿಸುವಂತೆ ಕಾಣುತ್ತದೆ.