ಬೆಂಗಳೂರು: ಇಲ್ಲಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಶಂಕಿತನ ಜಾಡು ಹಿಡಿದಿದ್ದಾರೆ.
ಶಂಕಿತ ಆರೋಪಿ ಬಿಎಂಟಿಸಿ ವೋಲ್ವೋ ಡಿಪೋ- 13ರ ಕಾಮಾಕ್ಯಗೆ ಸೇರಿದ್ದ ಕೆಎ- 57- F 186 ನಂಬರಿನ ಬನಶಂಕರಿ ಯಿಂದ ಐಟಿಪಿಎಲ್ ಮಾರ್ಗವಾಗಿ ತೆರಳುತ್ತಿದ್ದ ಬಸ್ ನಲ್ಲಿ ಪ್ರಯಾಣಿಸಿದ್ದಾನೆ ಎನ್ನಲಾಗಿದೆ.
ಈತ ಕುಂದಹಳ್ಳಿಯಿಂದ ಬಸ್ ಹತ್ತಿ ನಂತರ ಸಿಎಂಆರ್ ಐಟಿ ಕಾಲೇಜು ನಿಲ್ದಾಣದಲ್ಲಿ ಇಳಿದುಕೊಂಡಿದ್ದಾನೆ. ಈ ಕುರಿತು ಸಿಸಿಟಿವಿ ವಿಡಿಯೋ ಪರಿಶೀಲಿಸಿ ಸಂಬಂಧಪಟ್ಟವರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಹೀಗಾಗಿ ಮೆಜೆಸ್ಟಿಕ್ ಹಾಗೂ ಬಸ್ ನಿಲ್ದಾಣಗಳಲ್ಲಿ ಪೊಲೀಸರು ಲಗೇಜ್ ಪರಿಶೀಲಿಸುತ್ತಿದ್ದಾರೆ. ಅಲ್ಲದೇ, ಪ್ರಯಾಣಿಕರ ಮೇಲೆ ಕೂಡ ನಿಗಾವಹಿಸಲಾಗಿದೆ.