ಯಾರಿಗೆ ಯಾವ ಟೈಮ್ ನಲ್ಲಿ ಅದೃಷ್ಟ ಕೈ ಹಿಡಿಯುತ್ತದೆ ಎಂಬುವುದು ತಿಳಿಯುವುದಿಲ್ಲ. ಕೆಲವರು ರಾತ್ರೋರಾತ್ರಿ ಪ್ರಸಿದ್ಧಿಯಾದರೆ ಇನ್ನೂ ಕೆಲವರು ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಇಲ್ಲೊಬ್ಬ ಆಟೋ ಚಾಲಕ ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ.
ಕೇರಳದ ಆಟೋ ಚಾಲಕ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ, ಇಂದು ಬೆಳಗಾಗುವಷ್ಟರಲ್ಲಿ ಅವರು ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.
ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ 10 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ. ಕೇರಳದ ಕಾರ್ತಿಕಪುರದ ರಾರರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದರು. ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ ಬರೋಬ್ಬರಿ 10 ಕೋಟಿ ರೂ. ಹಣ ಗೆದ್ದಿದ್ದಾರೆ. ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸಿರ್, ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ತಿಳಿಸಿದ್ದಾರೆ. ಟಿಕೆಟ್ ಖರೀದಿಸಿದ ಒಂದೇ ರಾತ್ರಿಯಲ್ಲಿ ನಾಸಿರ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.