ರಾಜ್ಯದಲ್ಲಿ ಕೂಡ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಮೂರು ಪಕ್ಷಗಳೂ ಗೆಲುವಿನ ಲೆಕ್ಕಾಚಾರದಲ್ಲಿ ಇವೆ. ಈ ಮಧ್ಯೆ ಇಂಡಿಯಾ ಟಿವಿ ತಾಜಾ ಸಮೀಕ್ಷೆ ಹೊರ ಬಿದ್ದಿದ್ದು, ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇಂಡಿಯಾ ಟಿವಿಯ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಆದರೆ, ಕಳೆದ ಬಾರಿಯಷ್ಟು ಸ್ಥಾನಗಳು ಬಿಜೆಪಿಗೆ ಸಿಗುವುದಿಲ್ಲ. ಕೆಲವು ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಒಂಬತ್ತು, ಬಿಜೆಪಿ ಐದು, ಬಿಆರ್‌ಎಸ್ ಎರಡು, ಇನ್ನಿತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಿಜೆಪಿ 22, ಕಾಂಗ್ರೆಸ್ 4 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ಹೇಳುತ್ತಿದೆ.
ಚಿಕ್ಕೋಡಿ – ಕಾಂಗ್ರೆಸ್, ಬೆಳಗಾವಿ – ಬಿಜೆಪಿ, ಬಾಗಲಕೋಟೆ – ಬಿಜೆಪಿ, ಬಿಜಾಪುರ – ಬಿಜೆಪಿ, ಗುಲ್ಬರ್ಗಾ – ಕಾಂಗ್ರೆಸ್, ರಾಯಚೂರು – ಬಿಜೆಪಿ, ಬೀದರ್ – ಬಿಜೆಪಿ, ಕೊಪ್ಪಳ – ಬಿಜೆಪಿ, ಬಳ್ಳಾರಿ – ಬಿಜೆಪಿ, ಹಾವೇರಿ – ಬಿಜೆಪಿ, ಧಾರವಾಡ – ಬಿಜೆಪಿ, ಉತ್ತರ ಕನ್ನಡ – ಬಿಜೆಪಿ, ದಾವಣಗೆರೆ – ಬಿಜೆಪಿ, ಶಿವಮೊಗ್ಗ – ಬಿಜೆಪಿ, ಉಡುಪಿ ಚಿಕ್ಕಮಗಳೂರು – ಬಿಜೆಪಿ, ಹಾಸನ – ಜೆಡಿಎಸ್, ದಕ್ಷಿಣ ಕನ್ನಡ – ಬಿಜೆಪಿ, ಚಿತ್ರದುರ್ಗ – ಬಿಜೆಪಿ,
ತುಮಕೂರು – ಬಿಜೆಪಿ, ಮಂಡ್ಯ – ಜೆಡಿಎಸ್, ಮೈಸೂರು – ಬಿಜೆಪಿ, ಚಾಮರಾಜನಗರ – ಕಾಂಗ್ರೆಸ್, ಬೆಂಗಳೂರು ಗ್ರಾಮಾಂತರ – ಕಾಂಗ್ರೆಸ್, ಬೆಂಗಳೂರು ಉತ್ತರ – ಬಿಜೆಪಿ, ಬೆಂಗಳೂರು ಸೆಂಟ್ರಲ್ – ಬಿಜೆಪಿ, ಬೆಂಗಳೂರು ದಕ್ಷಿಣ – ಬಿಜೆಪಿ, ಚಿಕ್ಕಬಳ್ಳಾಪುರ – ಬಿಜೆಪಿ, ಕೋಲಾರ – ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಸಮೀಕ್ಷೆ ಹೇಳಿದೆ.