ಲೈಂಗಿಕ ಹಗರಣದ ಪೆನ್ ಡ್ರೈವ್ ವಿಷಯದ ಸಂಬಂಧ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶಾಸಕ ಯತ್ನಾಳ್, “ಎರಡು ಕುಟುಂಬದ ರಾಜಕಾರಣಕ್ಕೆ ರಾಜ್ಯ ಬಲಿಯಾಗಲಿದೆ” ಎಂದರು.
“ಕಳೆದ ಬಾರಿ ನಿಮ್ಮ ಮೈತ್ರಿಯಲ್ಲಿ ಆತ ಸಂಸದನಾಗಿದ್ದು, ಇದು ಆಗಿನಿಂದಲೇ ನಡೆದು ಬಂದಿದ್ದು” ಎಂದು ಕಾಂಗ್ರೆಸ್ಸನ್ನು ತಿವಿದರು. ನಿಮ್ಮ ಸರ್ಕಾರ ಅಡ್ಜೆಸ್ಟ್ ಮೆಂಟ್ ಸರ್ಕಾರ. ನಿಮ್ಮ ಅವಧಿಯಲ್ಲಿ ಎರಡು ಫೋಕ್ಸೋ ಪ್ರಕರಣ, “ಪಿಎಸ್ಐ” ಹಗರಣ , ನಟ-ನಟಿಯರ ಡ್ರಗ್ ಕೇಸ್ ಇವೆಲ್ಲಾ ಕೇಸು ಏನಾಗಿದೆ? ಯಾಕೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಯತ್ನಾಳ್, ‘ಪೆನ್ ಡ್ರೈವ್ ಆರೋಪಿ’ ಊರು ಬಿಡುವಾಗ ಸರ್ಕಾರ ಎಲ್ಲಿ ಮಲಗಿತ್ತು? ಎಂದು ಕೇಳಿದರು.
“ನಾನು ಈ ಮೊದಲೇ ಹೇಳಿದಂತೆ ಈ ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ. ಅದರಲ್ಲಿ ಒಂದನ್ನು ಕುಮಾರಸ್ವಾಮಿಯವರು ಹೇಳಿದ್ದಾರೆ. ಇನ್ನೊಂದನ್ನು ನಾನು, ಏಳನೇ ತಾರೀಖು ಹೇಳುತ್ತೇನೆ” ಎಂದರು.