ಚಿಕ್ಕಬಳ್ಳಾಪುರ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ರಕ್ಷಾರಾಮಯ್ಯ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ನಾನು ಲೋಕಸಭಾ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಹೈಕಮಾಂಡ್ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡಲಿದ್ದೇನೆ. ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು. ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ. ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ. ನಿಮಗೆ ಸಾಕಷ್ಟು ಸೌಭಾಗ್ಯ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಆದರೂ ನಿಷ್ಠಾವಂತನಾಗಿದ್ದರೆ ಅದು ನಾನು ಮಾತ್ರ. ಸಾಯುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. 10 ವರ್ಷದಿಂದ ನಡೆಯದಿರುವ ಕೆಲಸ ನೀವು ಐದು ವರ್ಷದಲ್ಲಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ಎಲ್.ಕೆ.ಅಡ್ವಾಣಿ ಪ್ರಧಾನಿಯಾಗಬೇಕಿತ್ತು, ಆದರೆ ಆಗಲಿಲ್ಲ. ಆ ಸಮಯದಲ್ಲಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಎಂದು ಹೇಳಿದ್ದರು. ಆದರೆ ಮೋದಿ ಇಂದಿಗೂ ಸಹಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಪುಲ್ವಾಮಾ ದಾಳಿ ನಡೆಸಿದರು. ಚುನಾವಣೆ ಒಳಗೆ ಏನೇನು ಮಾಡ್ತಾರೋ ನೋಡಿ ಎಂದು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಕಣ್ಣೀರಿನ ಮೂಲಕ ಬಂದಿದ್ದಾರೆ. ಅದು ಸಾಕಾಗಲ್ಲ. ರಕ್ತ ಕಣ್ಣೀರು ಸುರಿಸಬೇಕು ಎಂದು ಹೇಳಿದ್ದಾರೆ.