ಮಾಸ್ಕೋ: ಇಲ್ಲಿಯ ಕನ್ಸರ್ಟ್ ಹಾಲ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 11 ಜನ ಶಂಕಿತರನ್ನು ಬಂಧಿಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 110 ಜನ ಸಾವನ್ನಪ್ಪಿ, 145ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಜನ ಶಂಕಿತರನ್ನು ಬಂಧಿಸಲಾಗಿದೆ. ದಾಳಿಕೋರರು ಉಕ್ರೇನ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಯೋತ್ಪಾದಕ ದಾಳಿ ನಡೆಸಿದ ನಂತರ, ಅಪರಾಧಿಗಳು ರಷ್ಯಾ-ಉಕ್ರೇನಿಯನ್ ಗಡಿ ದಾಟಲು ಯತ್ನಿಸಿದ ಸಂದರ್ಭದಲ್ಲಿ ಬಂಧಿಸಲಾಗಿದೆ.
ಆದರೆ, ರಷ್ಯಾ ಮಾಡಿರುವ ಆರೋಪಕ್ಕೆ ಉಕ್ರೇನ್ ತಿರುಗೇಟು ನೀಡಿದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್ ಪ್ರೆಸಿಡೆನ್ಸಿ ತಿಳಿಸಿದೆ.
ಚಹರೆ ಮರೆಮಾಚುವ ಸಮವಸ್ತ್ರ ಧರಿಸಿದ್ದ ದಾಳಿಕೋರರು ಕಟ್ಟಡ ಪ್ರವೇಶಿಸಿ ಗುಂಡು ಹಾರಿಸಿದ್ದಾರೆ. ಗ್ರೆನೇಡ್ ಅಥವಾ ಬಾಂಬ್‌ಗಳನ್ನು ಎಸೆದಿರಬಹುದು. ಸಭಾಂಗಣದಲ್ಲಿ ಬೆಂಕಿ ಆವರಿಸಿತ್ತು. ಇದಕ್ಕೆ ಸಂಬಂಧಿಸಿದಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.