ಆನೆಕಲ್ : ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ವಿನಾಯಕ ನಗರದಲ್ಲಿ ಕಳೆದ ಶುಕ್ರವಾರ ರಾತ್ರಿ ರವಿ ಕುಮಾರ್ ಕೊಲೆಯಾಗಿತ್ತು.
ಆರಂಭದಲ್ಲಿ ಯುವಕ ರವಿ ಕೊಲೆಗೆ ಯುವತಿಯೊಬ್ಬಳ ಜೊತೆಗಿನ ಲವ್ ಬ್ರೇಕಪ್ ಕಾರಣ ಎನ್ನಲಾಗಿತ್ತು. ಪ್ರಕರಣದ ಆರೋಪಿಗಳಾದ ಆನೇಕಲ್ ಪಟ್ಟಣದ ಮನೋಜ್, ಸೋಲೂರಿನ ಮನೀಷ್ ಮತ್ತು ಮನ್ಮಥ ಅರೆಸ್ಟ್ ಆದ ಬೆನ್ನಲ್ಲೇ ಆಡಿಯೋ ವೈರಲ್ ಆದ ಬಳಿಕ, ಕೊಲೆಗೆ ಕೇವಲ 2 ಸಾವಿರ ರೂ. ಕಾರಣ ಎಂಬುದು ಬಯಲಾಗಿ ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು.
ಕೊಲೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ಪ್ರಕರಣದ ಪ್ರಾಮಾಣಿಕ ತನಿಖೆಗೆ ಒತ್ತಾಯಿಸಿದ್ದಾರೆ.
ರವಿ ಕೊಲೆ ಹಿಂದೆ ಯುವತಿ ಕೈವಾಡದ ಶಂಕೆ ವ್ಯಕ್ತಪಡಿಸಿದ್ದು, ರವಿ ಪ್ರೇಯಸಿ ಕಾವ್ಯ ಮತ್ತು ಆಕೆಯ ತಮ್ಮನ ಕೈವಾಡವಿದೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ರವಿ ಜೊತೆ ಪ್ರೀತಿ ಮುರಿದುಕೊಳ್ಳಲು ಕಾವ್ಯ ಹೇಳಿದ್ದಾಳೆ. ಕುಡಿತದ ಚಟದ ನೆಪ ಹೇಳಿ ಪ್ರೀತಿ ಮುರಿದುಕೊಳ್ಳುವಂತೆ ಒತ್ತಾಯಿಸಿದ್ದಾಳೆ.ಇದರ ನಡುವೆ ಮನೆಯಲ್ಲಿ ಬೇರೆ ಸಂಬಂಧ ನೋಡಿದ್ದರು. ಆದರೇ, ಬೇರೆ ಯುವತಿ ಜೊತೆ ಮದುವೆಗೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ರವಿ ಗಲಾಟೆ ಮಾಡಿದ್ದ. ಪ್ರೇಯಸಿಗೆ ಹಣ ನೀಡಬೇಕು. ಹಣ ನೀಡಿದರೆ ಸಂಬಂಧ ಮುಗಿದು ಹೋಗಲಿದೆ. ಬಳಿಕ ನಾನು ಸರಿ ಹೋಗುತ್ತೆನೆ ಎಂದು ರವಿ ಹೇಳಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಾತ್ರವಲ್ಲದೇ, ಕೊಲೆಯಾಗುವುದಕ್ಕೂ ಹಿಂದಿನ ದಿನ ಪ್ರೇಯಸಿ ಮನೆಗೆ ಹೋಗಿದ್ದ. ಅಲ್ಲಿಂದ ನನಗೆ ಏನಾದರೂ ಆದರೆ ಕಾವ್ಯ ವಿಚಾರ ತೆಗೆಯಬಾರದು ಎಂದಿದ್ದ. ಹಾಗೇ ಹೇಳಿ ಮಾರನೇ ದಿನ ರಾತ್ರಿ ಕೊಲೆಯಾಗಿದ್ದಾನೆ. ನನ್ನ ಮಗನ ಸಾವಿಗೆ ಕಾವ್ಯ ಮತ್ತು ಆಕೆಯ ತಮ್ಮ ಕಾರಣ. ಅವರನ್ನು ಬಂಧಿಸಬೇಕು. ಪ್ರಾಮಾಣಿಕ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಅವಲತ್ತುಕೊಂಡಿದ್ದಾರೆ.