ಕಾರವಾರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಅಭಿಮಾನಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ಮಾತೆಗೆ ವ್ಯಕ್ತಿಯೊಬ್ಬ ರಕ್ತ ಅರ್ಪಿಸಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ಈ ಘಟನೆ ನಡೆದಿದೆ. ಕೈಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ವ್ಯಕ್ತಿಯನ್ನು ಅರುಣ್ ವರ್ಣೇಕರ್ ಎನ್ನಲಾಗಿದೆ. ಅಷ್ಟೇ ಅಲ್ಲ. ಈ ವ್ಯಕ್ತಿ ಮೋದಿಗಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಕೂಡ ಮಾಡುತ್ತಿದ್ದಾರೆ.
ಅರುಣ್, ಬೆರಳು ಕತ್ತರಿಸಿಕೊಂಡು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಗೋಡೆ ಮೇಲೆ ಬರೆದಿದ್ದಾರೆ. ರಕ್ತದಲ್ಲಿ, ‘‘ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ’’ ಎಂದು ಬರೆದಿದ್ದಾರೆ. ‘‘ಮೋದಿ ಬಾಬ ಪಿಎಂ, 3 ಬಾರ್ 78ತಕ್ 378, 378+ ಮೇರ ಮೋದಿ ಬಾಬಾ ಸಬ್ ಸೆ ಮಹಾನ್ ’ ಎಂದು ಬೆರೆದಿದ್ದಾರೆ.
ಮೋದಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಅರುಣ್ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಈ ಹಿಂದೆ ಕೂಡ ಈ ವ್ಯಕ್ತಿ ಇದೇ ರೀತಿ ಬೆರಳು ಕತ್ತರಿಸಿಕೊಂಡಿದ್ದರು. ಈಗ ಮತ್ತೆ ಹರಕೆ ಹೊತ್ತಿದ್ದಾರೆ. ಅರುಣ್ ವರ್ಣೇಕರ್ ಎದೆಯ ಮೇಲೆ ಮೋದಿ ಟ್ಯಾಟೂ ಹಾಕಿಸಿಕೊಂಡು ಮೋದಿ ಆರಾಧಿಸುತ್ತಿದ್ದಾರೆ.