ನಟಿ ಜಾನ್ವಿ ಕಪೂರ್ ಮೊಣಕಾಲಿನಿಂದಲೇ ತಿಮ್ಮಪ್ಪನ ಬೆಟ್ಟ ಹತ್ತಿದ್ದಾರೆ.
ಅವರಿಗೆ ದೇವರ ಮೇಲೆ ತುಂಬಾ ಭಕ್ತಿ ಎನ್ನುವುದು ಆಗಾಗ ಸಾಬೀತಾಗುತ್ತಲೇ ಇತ್ತು. ತಿರುಪತಿಗೆ ಅವರು ಹೆಚ್ಚು ತೆರಳುತ್ತಾರೆ. ಇತ್ತೀಚೆಗೆ ಜಾನ್ವಿ ಕಪೂರ್ ಮಂಡಿ ಊರಿ ತಿರುಪತಿ ದೇವಸ್ಥಾನದ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಜಾನ್ವಿ ತಮ್ಮ ಹುಟ್ಟು ಹಬ್ಬದ ದಿನ ಅಂದರೆ ಮಾರ್ಚ್ 6ರಂದು ತಿರುಪತಿ ದೇವರ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತರಾದ ಶಿಖರ್ ಪಹಾರಿಯಾ ಮತ್ತು ಓರಿ ಇದ್ದರು.
ದೇವಸ್ಥಾನದ ಸಮೀಪ ಬಂದಾಗ ಜಾನ್ವಿ ಕಪೂರ್ – ಶಿಖರ್ ತಿರುಮಲ ದೇವಸ್ಥಾನದ ಮೆಟ್ಟಿಲುಗಳನ್ನು ಮೊಣಕಾಲಿನ ಮೂಲಕ ಹತ್ತಿದರು. ಜಾನ್ವಿ ಕಪೂರ್ ಅವರು ಇದುವರೆಗೆ ಸುಮಾರು 50 ಬಾರಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅವರ ಸ್ನೇಹಿತೆ ವಿಡಿಯೋದಲ್ಲಿ ಹೇಳಿದ್ದಾರೆ.
ಸದ್ಯ ಜೂನಿಯರ್ ಎನ್ ಟಿಆರ್ ‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಮತ್ತೊಂದು ತೆಲುಗಿನಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ರಾಮ್ ಚರಣ್ 16ನೇ ಚಿತ್ರಕ್ಕೆ ಜಾನ್ವಿ ನಾಯಕಿ ಆಗಿದ್ದಾರೆ.