ಹೋದ-ಬಂದಲ್ಲಿ ಬಿಜೆಪಿಗರಿಗೆ ಮೈತ್ರಿಯ ಮುಳ್ಳಾಗಿರುವ ಪೆನ್ ಡ್ರೈವ್ ಪ್ರಕರಣ ಚುಚ್ಚಿ ಚುಚ್ಚಿ ಕಾಡುತ್ತಿದೆ. ಸರಿಯಾಗಿ ಚುನಾವಣೆಯ ಹೊತ್ತಲ್ಲೇ ಸಿಡಿ ನಾಯಕರು ಈ ದಾಳ ಉರುಳಿಸಿ ತಂತ್ರವೆಸಗಿದ್ದಾರೆ. ಈ ಬಗ್ಗೆ ಬಿಜೆಪಿ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮುಜುಗರವಾಗಿದೆ. ಆತ ಮಾಡಿದ್ದು ನೀಚ ಕೃತ್ಯ.
ನಿನ್ನೆ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ‘ಅಮಿತ್ ಶಾ’ ಪಾಲ್ಗೊಂಡಿದ್ದರು. ಈ ವೇಳೆ ಈ ಪೆನ್ ಡ್ರೈವ್ ಪ್ರಕರಣ ಪ್ರಸ್ತಾಪಿಸಿದ ಅಮಿತ್ ಶಾ, “ಅದೊಂದು ಹೀನ ಕೃತ್ಯ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರ ಪರ ನಮ್ಮ ಪಕ್ಷ ಎಂದಿಗೂ ನಿಲ್ಲುವುದಿಲ್ಲ ಆತನಿಗೆ ಕಠಿಣ ಶಿಕ್ಷೆಯಾಗಲಿ. ನಾವು ಎಂದಿಗೂ ಮಾತೃಶಕ್ತಿಯ ಪರ” ಎಂದು ತಮ್ಮ ಪಕ್ಷದ ನಿಲುವು ಸ್ಪಷ್ಟ ಪಡಿಸಿದರು. ಹಾಗೆಯೇ ಮಾತು ಮುಂದುವರೆಸಿ “ಆತನನ್ನು ವಿದೇಶಕ್ಕೆ ಹಾರಲು ಯಾಕೆ ಬಿಟ್ಟಿರಿ? ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.