ಮಹಾರಾಜರೇ, ನೀವು ಕೈ ಮುಗಿದುಕೊಂಡು ಹೋಗಿ ಸಾಕು, ನಿಮ್ಮ ಸಂಸದರು ಹತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿ ನಿಮಗೆ ಮತ ಹಾಕ್ತೀವಿ ಅಂತ ಜನರೇ ಹೇಳ್ತಾರೆ!
ಟಿಕೆಟ್ ಸಿಗದ ಸಿಂಹ ಗುಹೆ ಸೇರಿಕೊಳ್ಳುತ್ತದೆ ಅಂತೆಲ್ಲಾ ಲೇವಡಿ ಮಾಡಿದ್ದವರಿಗೆ ಅಣಕಿಸುವಂತೆ ಮತ್ತೆ ಅಬ್ಬರಿಸಿದ್ದಾರೆ, ಪ್ರತಾಪ್ ಸಿಂಹ! ಸಾಲದ್ದಕ್ಕೆ, ತಮ್ಮದೇ ಪಕ್ಷದ ತಮ್ಮ ಹಿತಶತ್ರುಗಳಿಗೂ ತಮ್ಮ ಮೊನಚಾದ ಮಾತಿನ ಚಾಟಿ ಬೀಸಿದ್ದಾರೆ!
ನೆನ್ನೆಯಿನ್ನೂ ರಾಮದಾಸ್ ಅವರ ಕಾಲಿಗೆ ಬಹಿರಂಗವಾಗಿ ನಮಸ್ಕರಿಸಿದ್ದ ಪ್ರತಾಪ್, ಟಿಕೆಟ್ ಸಿಗದಿದ್ದರಿಂದ ಕುಗ್ಗಿಹೋಗಿ ರಾಜಿಯ ದಾರಿ ಹಿಡಿದಿದ್ದಾರೇನೋ ಅನ್ನಿಸಿತ್ತು. ಆದರೆ ಇವತ್ತಿನ ಅವರ ಮಾತುಗಳು ಅದನ್ನು ಸುಳ್ಳು ಮಾಡಿವೆ, ಯದುವೀರರಿಂದ ಹಿಡಿದು ರಾಮದಾಸ್ ವರೆಗೆ ಎಲ್ಲರನ್ನೂ ತಡವಿವೆ!