ಮಸೀದಿಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಧರ್ಮ ಗುರುವನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
“ಅಜ್ಮೀರ್‌ನಲ್ಲಿ ಮಸೀದಿಯೊಂದರಲ್ಲಿ ಈ ಘಟನೆ ನಡೆದಿದೆ. ಮಸೀದಿ ಒಳಗೆ ನುಗ್ಗಿದ್ದ ಮೂವರು ಮುಸುಕುಧಾರಿಗಳು ಧರ್ಮ ಗುರುವನ್ನು ಹೊಡೆದು ಕೊಲೆ ಮಾಡಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಧರ್ಮಗುರು ಮೊಹಮ್ಮದ್ ಮಹಿರ್ ಕೊಲೆಯಾದವರು. ಮಸೀದಿ ಒಳಗೆ ನುಗ್ಗಿದ್ದ ಮುಸುಕುಧಾರಿಗಳು ಅಲ್ಲಿದ್ದವರನ್ನು ಹೆದರಿಸಿ ಓಡಿಸಿದ್ದಾರೆ. ಆ ನಂತರ ಕೋಲುಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೊಹಮ್ಮದ್ ಮಹಿರ್ ಎರಡು ದಿನಗಳ ಹಿಂದೆಯಷ್ಟೇ ಅಜ್ಮೀರ್‌ಗೆ ಆಗಮಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.