ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ.
ವರದಿಯಂತೆ ಬಿಹಾರದ ಬೇಗುಸರಾಯ್ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ. ದೆಹಲಿಯು ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
ಜನಗಳಿಗೆ ಉಸಿರು ಬಿಗಿಹಿಡಿದು ಬದುಕುವ ಪರಿಸ್ಥಿತಿ ಇದೆ. ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಇಲ್ಲಿ ಬಹುತೇಕರು ಚಳಿಗಾಲ ಬಂದಾಗ ದಕ್ಷಿಣ ಭಾರತ ಅಥವಾ ಈಶಾನ್ಯ ಭಾರತದ ಕಡೆ ಪ್ರಯಾಣ ಬೆಳೆಸುತ್ತಾರೆ. ಪ್ರತಿ ಘನ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ, ಬಾಂಗ್ಲಾದೇಶ (ಪ್ರತಿ ಘನ ಮೀಟರ್‌ಗೆ 79.9 ಮೈಕ್ರೊಗ್ರಾಂ) ಮತ್ತು ಪಾಕಿಸ್ತಾನ (73.7 ಮೈಕ್ರೋಗ್ರಾಂ ಪ್ರತಿ ಘನ ಮೀಟರ್) ನಂತರ 2023 ರಲ್ಲಿ 134 ದೇಶಗಳಲ್ಲಿ ಭಾರತ ಮೂರನೇ ಕೆಟ್ಟ ಗುಣಮಟ್ಟ ಹೊಂದಿದೆ.