ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕೊಟ್ಯಾಂತರ ರೂ. ದೇಣಿಗೆ ಹರಿದುಬಂದಿದೆ.
35 ದಿನಗಳಲ್ಲಿ 5.46 ಲಕ್ಷ ರೂ. ಕಾಣಿಕೆ ಸಂದಾಯವಾಗಿದ್ದು, ಮಠದ ಇತಿಹಾಸದಲ್ಲಿ ಇದೇ ಮೊದಲು ಅತಿ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ.
ರಾಯಚೂರು ಬಳಿಯ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಿನ್ನೆ ಮಠದ ನೂರಾರು ಸಿಬ್ಬಂದಿಗಳಿಂದ ಹಾಗೂ ಭಜನಾ ಮಂಡಳಿ ಭಕ್ತರಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಹುಂಡಿ ಎಣಿಕೆ ಕಾರ್ಯದಲ್ಲಿ127 ಗ್ರಾಂ. ಬಂಗಾರ, 1820 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.