ಬಘೀರ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿಯಲ್ಲಿದ್ದ ನಟ ಶ್ರೀಮುರುಳಿ (Srimurali) ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.
ಶ್ರೀಮುರುಳಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೂ ಅವರು ತಮ್ಮ ಹಕ್ಕು ಚಲಾಯಿಸುವುದನ್ನು ಮರೆತಿಲ್ಲ. ಮತದಾನದ (Voting) ನಂತರ ಮಾತನಾಡಿದ ಅವರು, ನಮ್ಮ ಹಕ್ಕು ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ದರು. ನೋಡಿ ತುಂಬಾ ಸಂತಸವಾಯಿತು. ಹಿರಿಯ ನಾಗರಿಕರು ಕೂಡ ಬಿಸಿಲನ್ನು ಲೆಕ್ಕಿಸದೆ ಬರುತ್ತಿರುವುದು ಸಂತಸದ ವಿಷಯ.
ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು. ಇಂತಹ ಜವಾಬ್ದಾರಿ ಮೆರೆಯಬಾರದು. ಇಲ್ಲೇನೂ ಯಾರಿಗೂ ಎಕ್ಸಾಂ ನಡೆಯಲ್ಲ. ಪ್ರತಿಯೊಬ್ಬರೂ ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು.
ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ಬೂತ್ ಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಆರ್ ಆರ್ ನಗರದಲ್ಲಿ ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಡಾ. ರಾಜ್ ಕುಟುಂಬಸ್ಥರು ಆಗಮಿಸಿ ಮತದಾನ ಮಾಡಿದ್ದಾರೆ. ನಟಿ ಸಪ್ತಮಿಗೌಡ ಕೂಡ ಮತದಾನ ಮಾಡಿದ್ದಾರೆ.