ಬಾಗಲಕೋಟೆ: ಯುವಕನೊಬ್ಬನಿಗೆ ತನ್ನ ಮಗಳ ಹಿಂದೆ ಹೋಗಬೇಡ ಎಂದು ಬುದ್ಧಿ ಹೇಳಿರುವ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಯುವತಿಯ ತಂದೆಯನ್ನೇ ಕೊಚ್ಚಿ ಹತ್ಯೆಗೈದ ಈ ಘಟನೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ. ಸಂಗನಗೌಡ (52) ಕೊಲೆಯಾಗಿರುವ ವ್ಯಕ್ತಿ. ಪ್ರವೀಣ್ ಕಾಂಬಳೆ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.
ಭಗವತಿ ಗ್ರಾಮದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಪ್ರವೀಣ್, ಹತ್ಯೆಯಾದ ಸಂಗನಗೌಡ ಎಂಬವರ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದು ಗೊತ್ತಾಗುತ್ತಿದ್ದಂತೆ ಸಂಗನಗೌಡ ಮಗಳ ಸಹವಾಸ ಬಿಡುವಂತೆ ಯುವಕನಿಗೆ ಥಳಿಸಿ ಎಚ್ಚರಿಕೆ ನೀಡಿದ್ದಾನೆ. ಹೊಡೆದ ಸಿಟ್ಟಿನಿಂದ ಮಚ್ಚಿನಿಂದ ಸಂಗನಗೌಡನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.