ಮೈಸೂರು: ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರೆಯೇ? ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಂಡ್ಯವನ್ನು ತಮ್ಮ ಕರ್ಮಭೂಮಿ ಅನ್ನುತ್ತಾ ಎಮೋಶನಲ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು. ಅವರು ವೀಕ್ ಕ್ಯಾಂಡಿಡೇಟ್ ಅಲ್ಲ.
2019 ರ ಲೋಕಸಭಾ ಚುನಾವಣೆ ವೇಳೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ? ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದ ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.