ಲಕ್ನೋ: ಅಲೆಕ್ಸಾದಿಂದಾಗಿ 13 ವರ್ಷದ ಬಾಲಕಿ ಹಾಗೂ ಮಗು ಪ್ರಾಣ ಉಳಿಸಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 13 ವರ್ಷದ ಬಾಲಕಿ ನಿಖಿತಾ ಮನೆಯೊಳಗೆ ತಮ್ಮ ಸೊಸೆ ವಮಿಕಾಳೊಂದಿಗೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಕುಟುಂಬದ ಇನ್ನಿತರ ಸದಸ್ಯರು ಪಕ್ಕದ ರೂಮಿನಲ್ಲಿದ್ದಾರೆ. ಈ ವೇಳೆ ಏಕಾಏಕಿ ಐದಾರು ಮಂಗಗಳು ಮನೆಯೊಳಗೆ ನುಗ್ಗಿವೆ.
ಪಾತ್ರೆ, ಆಹಾರ ಪದಾರ್ಥಗಳನ್ನೆಲ್ಲಾ ಎಸೆದು ಚೆಲ್ಲಾಪಿಲ್ಲಿ ಮಾಡಿವೆ. ಅಲ್ಲದೇ ಮಂಗವೊಂದು ಇಬ್ಬರ ಮೇಲೆ ದಾಳಿಗೆ ಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ನಿಖಿತಾ ಫ್ರಿಡ್ಜ್ ಮೇಲೆ ಇಟ್ಟಿದ್ದ ಅಲೆಕ್ಸಾದಿಂದ ನಾಯಿ ಬೊಗಳುವ ಶಬ್ದ ಪ್ಲೇ ಮಾಡಿದ್ದಾಳೆ. ಇದರಿಂದಾಗಿ ಮಂಗಗಳು ಹೆದರಿ ಓಡಿ ಹೋಗಿವೆ. ಈ ಕುರಿತು ತಾಯಿ ಸಂತಸ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ.