ಇಸ್ಲಾಮಾಬಾದ್: ಭೀಕರ ಮಳೆಗೆ 37 ಜನ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ವರದಿಯಾಗಿದೆ.
ಪಾಕ್ ದೇಶದ ಹಲವು ಪ್ರದೇಶಗಲ್ಲಿ ಭೀಕರ ಮಳೆಯಾಗುತ್ತಿದ್ದು, ಹಲವೆಡೆ ಮನೆ ಹಾಗೂ ಭೂ ಕುಸಿತವಾಗಿದೆ. ಜನ-ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ರಸ್ತೆಗಳು ಜಲಾವೃತವಾಗಿವೆ.
ಅಫ್ಘಾನಿಸ್ತಾನದ ಗಡಿಯಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸುಮಾರು 10 ಜಿಲ್ಲೆಗಳಲ್ಲಿಯೇ ವ್ಯಾಪಕ ಮಳೆ ಸುರಿದಿದೆ. ಅಲ್ಲದೇ, ಮಳೆಯಿಂದಾಗಿ ಹಲವರು ಗಾಯಗೊಂಡಿದ್ದು, ಸೂಕ್ತ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ವ್ಯಾಪಕವಾಗಿ ಹಿಮ ಕೂ ಬಿದ್ದಿದ್ದು ಚೀನಾದೊಂದಿಗೆ ಸಂಪರ್ಕಿಸುವ ಕಾರಕೋರಂ ಹೆದ್ದಾರಿ ಬಂದ್ ಆಗಿದೆ. ಈ ಹಿಂದೆ 2022ರಲ್ಲಿ ಕೂಡ ಪಾಕ್ ನಲ್ಲಿ ಭಾರೀ ಪ್ರವಾಹದಿಂದಾಗಿ 1800ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.