ಲೋಕಸಭೆಯ ಕಾವು ರಾಜ್ಯ ಸೇರಿದಂತೆ ದೇಶದಲ್ಲಿ ಜೋರಾಗಿದ್ದು, ಶಿವಮೊಗ್ಗ ಕಾಂಗ್ರೆಸ್ ಅಬ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಅವಕಾಶ ಸಿಕ್ಕರೆ ನನ್ನ ತಂದೆಯಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಅವರು ಹಿಂದೆ ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಈಗ ಮತ್ತೆ ಅಖಾಡಕ್ಕೆ ಇಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಂದೆಯಿಂದ ಯಾವ ತಂತ್ರವನ್ನೂ ಪಡೆದಿಲ್ಲ. ನಮ್ಮ ತಂದೆ ಮೊದಲು ಶಾಸಕ ಆಗಿದ್ದು ನಾನು ಎರಡು ವರ್ಷದವಳಿದ್ದಾಗ. ಹಾಗಾಗಿ ನಾನು ಅವರ ರಾಜಕೀಯದ ಪಯಣವನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಎಲ್ಲವನ್ನೂ ಹೃದಯದಿಂದ ಮಾಡುತ್ತಿದ್ದರು. ಅದೇ ರೀತಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.