ಗೆಲುವು ಸೋಲು ಶಿವಣ್ಣ ಎಂದಿಗೂ ಲೆಕ್ಕ ಇಟ್ಟಿಲ್ಲ. ಅದೇ ಕಾರಣಕ್ಕೆ ಶಿವಣ್ಣನ ಸಿನಿಮಾಗಳು ಸಾಲು-ಸಾಲು ಬರುತ್ತಲೇ ಇರುತ್ತೆ. ಇವರ ಸಿನಿಮಾಗಳು ಸೋಲಬಹುದು; ಆದರೆ ಸುಣ್ಣವಾಗಲ್ಲ!. ಪ್ರತಿ ಸಿನಿಮಾಗಳ ಬ್ಯುಸಿನೆಸ್ಸು ಒಂದೊಳ್ಳೆ ಬೆಲೆಗೆ ಕುದುರಿಯೇ ಕುದುರುತ್ತವೆ. ಆ ಮಟ್ಟಿಗೆ ಶಿವಣ್ಣ ಕಟ್ಟಿಕೊಂಡ ಮಾರುಕಟ್ಟೆ, ಸಖತ್ ಕಟ್ಟುಮಸ್ತು. ಅಸಲಿಗೆ, ಯೋಗರಾಜ್ ಭಟ್ಟರು ಸದ್ಯ ಗರಡಿ ಸೋಲಲ್ಲಿ ಸುಳಿದು ಬಂದವರು. ಆ ಸೋಲು ಚಿತ್ರದ ನಿರ್ಮಾಪಕರಿಗೆ ಭಯಾನಕವೆನಿಸಿದೆ. ನಿಜಕ್ಕೂ ಬಿಸಿ ಪಾಟೀಲ್ ‘ಗರಡಿ’ ಎಂದರೆ ನಿಂತಲ್ಲೇ ಹೆಡೆ ಎತ್ತಿ ಬುಸುಗುಡುತ್ತಿದ್ದಾರೆ. ಅದು ಏನೇ ಆಗಲಿ, ಅವರಿಗೆ ಇನ್ನೊಂದು ಸಿನಿಮಾ ಮಾಡಿಯೇ ಭಟ್ಟರು, ಗರಡಿಯ ಲಾಸ್ ಕಟ್ಟಿಕೊಡಬಹುದು. ಈ ಲೆಕ್ಕಾಚಾರದ ನಡುವೆಯೇ , ಪ್ರಭುದೇವ,- ಶಿವಣ್ಣ ಕಾಂಬಿನೇಶನ್ನಿನ ‘ಕರಟಕ-ಧಮನಕ’ ಚಿತ್ರ ಮುಗಿಸಿ, ರಿಲೀಸಿಗೆ ತಂದಿದ್ದಾರೆ. ಈ ಕಾಂಬಿನೇಶನ್ ಎಫೆಕ್ಟಿಗೆ, ಯಥಾ ಪ್ರಕಾರ ಚಿತ್ರದ ಮೇಲಿನ ನಿರೀಕ್ಷೆಯೇನೋ ಸಖತ್ ಸೌಂಡು ಮಾಡುತ್ತಿದೆ. ನಿರೀಕ್ಷೆ ಇಟ್ಟ ಆ ಮಟ್ಟಿಗೆ ಭಟ್ಟರು ಚಿತ್ರ ಕಟ್ಟಿದ್ದಾರೆಯೇ ಎಂಬುದು, ಇದೇ ಮಾರ್ಚ್ ಎಂಟಕ್ಕೆ ತಿಳಿಯಲಿದೆ. ಅಂದರೆ ಕರಟಕ ದಮನಕ ಇದೇ ಮಾರ್ಚ್ ಎಂಟಕ್ಕೆ ರಿಲೀಸ್ ಆಗುತ್ತಿದೆ.
ಕರಟಕ- ಧಮನಕ ಚಿತ್ರ, ಭಟ್ರು-ಶಿವಣ್ಣ- ಪ್ರಭುದೇವ ಕಾಂಬಿನೇಶನ್ನು ಎಂದಾಗಲೇ, ಬೆಟ್ಟದತ್ತ ನಿರೀಕ್ಷೆ ಜಾರಿಕೊಂಡಿತ್ತು. ಅಂದಹಾಗೆ ಈ ನಿರ್ಮಾಪಕರಾಗಿ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದರಿಂದ ಚಿತ್ರದಲ್ಲಿ ಖರ್ಚಿಗೇನೂ ಕಮ್ಮಿ ಬಿದ್ದಿಲ್ಲ . ಕಾಟೇರ ಚಿತ್ರ ಮಾಡಿದ ಭರ್ಜರಿ ವ್ಯಾಪಾರವು, ರಾಕ್ ಲೈನ್ ವಿಶ್ವಾಸ ಹೆವಿ ಕಚ್ಚುವಂತಾಗಿದೆ .
ಚಿತ್ರತಂಡ ಹೇಳಿಕೊಂಡಂತೆ, ಯೋಗರಾಜ್ ಭಟ್ರು ತಮ್ಮ ಸಿನಿಮಾಗೆ ಇದೇ ಮೊದಲ ಬಾರಿಗೆ, ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಡೈಲಾಗ್ ಮೂಲಕ ಮೋಡಿಗಿಳಿದಿದ್ದಾರಂತೆ. ಈ ಬಗ್ಗೆ ಡಬ್ಬಿಂಗ್ ಟೈಮಲ್ಲಿ ಚಿತ್ರ ಕಂಡವರೆಲ್ಲ, ಚಿತ್ರದ ಮೇಲೊಂದು ‘ಹೋಪು ಮಡಗಿಕೊಂಡಿದ್ದಾರೆ’ ಎನ್ನಲಾಗ್ತಿದೆ. ‘ಭಟ್ರ-ಶಿವಣ್ಣ-ಪ್ರಭುದೇವ ಕಾಂಬಿನೇಶನ್ನು ವರ್ಕ್ ಆಗಿದ್ದು, ಸಿನಮಾ ಸದ್ದು ಮಾಡಿಯೇ ತೀರಲಿದೆ’ ಎಂಬುದು ಚಿತ್ರತಂಡದ ದೃಢವಾದ ವಿಶ್ವಾಸ. ಒಟ್ಟಿನಲ್ಲಿ ‘ ಕರಟಕ ಧಮನಕ ಚಿತ್ರವು, ನಿರೀಕ್ಷೆ ಇಟ್ಟಂತೆಯೇ ಮೂಡಿ ಬಂದಿದ್ದು, ಚಿತ್ರ ಗೆಲ್ಲಲಿದೆ’ ಎಂಬುದು ಚಿತ್ರತಂಡದ ಮಾತು.