ಬೆಂಗಳೂರಿನಲ್ಲಿ ಈ ಬಾರಿ ಕೇವಲ ನೀರಿನ ಅಭಾವ ಮಾತ್ರ ಇಲ್ಲ. ವಾಸ್ತವವಾಗಿ ಇದು ಭೀಕರ ಜಲಕ್ಷಾಮ. ಜಲಕ್ಷಾಮದ ಸಂದರ್ಭದಲ್ಲಿ ನೀರನ್ನು ಜತನದಿಂದ ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ. ಮನಸೋ ಇಚ್ಛೆ ಬೋರವೆಲ್ ಕೊರೆದು ನೀರಿನ ಮೂಲಕ್ಕೇ ಕನ್ನ ಹಾಕುತ್ತಲೇ ಇದ್ದೇವೆ. ಪರಿಣಾಮವಾಗಿ ರಾಜ್ಯದಲ್ಲಿ ಎಂದೂ ಕಂಡರಿಯದ ಜಲಾಭಾವ ಕಂಡುಬರುತ್ತಿದೆ. ಈ ಅಮೂಲ್ಯ ಜೀವನಾಧಾರವಾದ ನೀರನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ಇಂಥ ಹೊತ್ತಲ್ಲಿ, ಸರ್ಕಾರ ತಜ್ಞರ ಸಲಹೆಗಳನ್ನು ಪಾಲಿಸುವುದು ಕೂಡ ಮುಖ್ಯವಾಗುತ್ತದೆ.
ಬೆಂಗಳೂರಿನಲ್ಲಂತೂ ಭಾರೀ ಪ್ರಮಾಣದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ನಗರದ ಬಹುತೇಕ ಕಡೆ ಟ್ಯಾಂಕರ್ ಗಳಿಂದ ನೀರು ಪೂರೈಸಲಾಗುತ್ತಿದೆ. ಈ ಸಮಸ್ಯೆ ಮಧ್ಯೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿ ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ. ಆ ಸಲಹೆಗಳೇನು ಅನ್ನೋದನ್ನ ನೋಡೋಣ.
ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂಬ ಮುನ್ಸೂಚನೆ ಇದ್ದರೂ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸಿದ್ದರ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರು ಈಗ ಸಂಕಷ್ಟ ಪಡುವಂತಾಗಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಿಲಿಕಾನ್ ಸಿಟಿಯ ಬಹುತೇಕ ಭಾಗಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಆರೋಪಿಸಿರುವ ಅವರು, ಸಪ್ತ ಸಲಹೆ ನೀಡಿದ್ದಾರೆ. ಅಲ್ಲದೇ, ಈ ಸಲಹೆಗಳನ್ನು ಸ್ರಕಾರ ಪಾಲಿಸದಿದ್ದರೆ ಧರಣಿ ನಡೆಸುವ ಕುರಿತು ಕೂಡ ಎಚ್ಚರಿಕೆ ನೀಡಿದ್ದಾರೆ. ಆ ಸಪ್ತ ಸಲಹೆ ಏನೆಂದರೆ, ಕುಡಿಯಲು ಯೋಗ್ಯವಲ್ಲದ ನೀರನ್ನು ಕೈಗಾರಿಕೆ, ಕಟ್ಟಡ ನಿರ್ಮಾಣಕ್ಕೆ ಬಳಸಬೇಕು. ಕುಡಿಯುವ ನೀರನ್ನು ತೊಂದರೆ ಇರುವ ಸ್ಥಳಕ್ಕೆ ಸರಬರಾಜು ಮಾಡಬೇಕು. ಸಂಸ್ಕರಣೆ ನೀರಿನ ಪ್ರಮಾಣ 1300 ಎಂಎಲ್ ಡಿ ಇದ್ದು, ಆ ನೀರನ್ನು ಮರು ಪೂರಣ ಜಾಲಕ್ಕೆ ಬಳಸಬೇಕು. ಭೂ ವಿಜ್ಞಾನಿಗಳ ಸಲಹೆ ಮೇರೆಗೆ ಸಾಧ್ಯವಿದ್ದ ಕಡೆ ಬೋರ್ ವೆಲ್ ಕೊರೆಯಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಳೆದ ತಿಂಗಳುಗಳಿಂದ ನಿಷ್ಕ್ರಿಯ ಸ್ಥಿತಿಯ ಸ್ಥಿತಿಯಲ್ಲಿರುವ ಬೋರ್ ವೆಲ್ ಗಳನ್ನು ಗುರುತಿಸಿ, ಮರುಪೂರಣ ಮಾಡಬೇಕು. ಟ್ಯಾಂಕರ್ ವ್ಯವಸ್ಥೆ ಮುಂದುವರೆಸೆ ಜನರಿಗೆ ನೀರು ಒದಗಿಸಬೇಕು. ಕಾವೇರಿ 5ನೇ ಹಂತದ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿ, ಸಲಹೆ ನೀಡಿದ್ದಾರೆ
ಇನ್ನೊಂದೆಡೆ ನೀರಿಗೆ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಟ್ಯಾಂಕರ್ ಗೆ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಟ್ಯಾಂಕರ್ ಮಾಲೀಕರು ಮಾತ್ರ ಸರ್ಕಾರದ ದರಕ್ಕೆ ಸೊಪ್ಪು ಹಾಕುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಜನರು ರೋಸಿ ಹೋಗಿದ್ದಾರೆ. ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ತಜ್ಞರ ಸಲಹೆ ಪಡೆದು ಜನರ ಬವಣೆ ನೀಗಿಸುತ್ತಾರಾ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದರು. ಬರ ಪರಿಸ್ಥಿತಿ ನಿರ್ವಹಿಸಲಕು ರಅಜಕೀಯ ಮಾಡೋದು ಬಿಟ್ಟು ಸಲಹೆಗಳನ್ನು ನೀಡಿ ಎಂದು ವಾಗ್ದಾಳಿ ನಡೆಸಿದ್ರು. ಇದೀಗ ಅವರಾಗಲಿ, ರಾಜ್ಯ ಸರ್ಕಾರವಾಗಲಿ ಈ ಸಲಹೆಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೆ ಅನ್ನೋದನ್ನು ಕಾದು ನೋಡಬೇಕು.