ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ಬೀದಿ ನಾಯಿಗಳಿಗೂ ಗ್ಯಾರಂಟಿ ಯೋಜನೆ ಕೊಡುವುದಕ್ಕೆ ಮುಂದಾಗಿ, ಬೀದಿ ನಾಯಿಗಳಿಗೆ ಊಟದ ವ್ಯವಸ್ಥೆಯನ್ನು ನಗರಪಾಲಿಕೆ ವತಿಯಿಂದ ನೀಡಲು ಸಜ್ಜಾಗಿತ್ತು. ಆದರೆ ಬಾಡೂಟ ಭಾಗ್ಯಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.
ಸರ್ಕಾರದ ಈ ನಡೆಗೆ ವಿಪಕ್ಷಗಳು, ತೆರಿಗೆದಾರರು ವಿರೋಧ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ಬೀದಿ ನಾಯಿಗಳಿಗೆ ಬಾಡೂಟ ಯೋಜನೆಯನ್ನು ರದ್ದು ಮಾಡಲಾಗಿದೆ.
ಈ ಹಿಂದೆ ಬಿಬಿಎಂಪಿ ಇದ್ದಗ ಬೀದಿ ನಾಯಿಗಳಿಗೆ ಬಾಡೂಟ ಯೋಜನೆಗೆ ಪಾಲಿಕೆ ಸಿದ್ದತೆ ನಡೆಸಿತ್ತು. ಅದರೆ ಬಿಬಿಎಂಪಿ ವಿಸರ್ಜನ ಅಗಿ 5 ನಗರಪಾಲಿಕೆ ಅಸ್ತಿತ್ವಕ್ಕೆ ಬಂದಿತ್ತು. ಈಗ 5 ನಗರ ಪಾಲಿಕೆಯ ಅಯುಕ್ತರಿಗೆ ಬಾಡೂಟ ಯೋಜನೆ ಜಾರಿಗೆ ತರುವಂತೆ ಸರ್ಕಾರ ತಿಳಿಸಿತ್ತು. ಸದ್ಯ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಗರ ಪಾಲಿಕೆಗಳು ಬಾಡೂಟ ಯೋಜನೆ ಜಾರಿಗೆ ತರಲು ಹಿಂದೆಟ್ಟು ಹಾಕಿದೆ.
ಸದ್ಯ ಗುಂಡಿಗಳಿಂದ ಸರ್ಕಾರದ ಮಾನಮರ್ಯದೆ ಬೀದಿಗೆ ಬಂದಿದೆ. ಆದ್ದರಿಂದ ನಗರದ ಗುಂಡಿಗಳನ್ನು ಮುಚ್ಚುವುದಕ್ಕೆ ಮೊದಲ ಆಧ್ಯತೆ ನೀಡಲಾಗಿದೆ.
ಇನ್ನೂ ತಮ್ಮ ತಮ್ಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಬೇಕು. ಸದ್ಯ ತಮ್ಮ ವ್ಯಾಪ್ತಿಯ ಬಜೆಟ್ ಕೂಡ ಮಾಡಿಲ್ಲ, ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳಿಗೆ ಮೊದಲು ಅಧ್ಯತೆ ನೀಡಲಾಗಿದ್ದು, ಬೀದಿ ನಾಯಿಗಳಿಗೆ ಬಾಡೂಟ ಯೋಜನೆ ಸದ್ಯ ಜಾರಿ ಇಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ ಎಂದು ನಗರಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



















