2024-25ರ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯವ್ಯಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧದಲ್ಲಿ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ರವರು ಶಾಸಕರು,ಸಂಸದರು,ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಸದಸ್ಯರೊಂದಿಗೆ ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ನಗರದ ಕೆಲ ಬಡಾವಣೆಗಳು ಯೋಜಿತವಾಗಿ ನಿರ್ಮಾಣಗೊಂಡಿದ್ದು, ಕೆಲವು ಪ್ರದೇಶಗಳು ಯೋಜಿತವಾಗಿ ಬೆಳೆದಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಹೊಸ ಯೋಜನೆ ತಯಾರಿಸಿ ಹೊಸ ರೂಪ ಕೊಡಲು ಸರಕಾರ ಮುಂದಾಗಿದೆ ಎಂದರು.
ಅದರಂತೆ, ಬ್ರ್ಯಾಂಡ್ ಬೆಂಗಳೂರಿನಡಿ ಯೋಜನೆಗಳ ಅನುಷ್ಠಾನ, ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನರ ಸುಗಮ ಸಂಚಾರಕ್ಕೆ ಒತ್ತು, ಅಕ್ರಮ-ಸಕ್ರಮ ಸಮಸ್ಯೆ ನ್ಯಾಯಾಲಯದಲ್ಲಿ ಬಗೆ ಹರಿಸುವುದು, ಸಂಚಾರ ದಟ್ಟಣೆ ನಿರ್ವಣೆಗೆ ಮೇಲ್ಸೇತುವೆ ನಿರ್ಮಾಣ, ಮೆಟ್ರೋ ಡಬ್ಬಲ್ ಡೆಕ್ಕರ್ ನಿರ್ಮಾಣಕ್ಕೆ ಅನುದಾನ ಹಾಗು ವಿಧಾಸಭಾ ಕ್ಷೇತ್ರದ ವಿಸ್ತೀರ್ಣ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವುದು ಸೇರಿದಂತೆ, ಹತ್ತು ಹಲವು ಉಪಯುಕ್ತ ಯೋಜನೆಗಳನ್ನೊಳಗೊಂಡ ಬಿಬಿಎಂಪಿ ಬಡ್ಜೆಟ್ ಸಿದ್ಧ ಪಡಿಸಲು ಸೂಚನೆ ನೀಡಿದರು. ಸಭೆಯಲ್ಲಿ ಸಚಿವರಾದ ಜಮೀರ ಆಹ್ಮದ್, ಕೃಷ್ಣಭೈರೇಗೌಡ, ಜಾರ್ಜ, ದಿನೇಶ್ ಗುಂಡುರಾವ್, ಸಂಸದ ಡಿಕೆ ಸುರೇಶ್, ಶಾಸಕರಾದ ಎಂ. ಕೃಷ್ಣಪ್ಪ, ಎಸ್.ಟಿ. ಸೋಮಶೇಖರ್, ಎಸ್. ಸುರೇಶ್ ಕುಮಾರ್, ಉದಯ್ ಗರುಡಾಚಾರ್, ರವಿ ಸುಬ್ರಹ್ಮಣ್ಯ, ಎಸ್. ಮುನಿರಾಜು, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಟಿ.ಎ. ಶರವಣ, ಭಾಗವಹಿಸಿದ್ದರು