ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಿಗಿ ಶಾಂತಿನಗರದ ಶಾಸಕ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ ಹ್ಯಾರೀಸ್, ಬಿಡಿಎ ಜನಸ್ನೇಹಿಯಾಗಿಸುವ ಬಗ್ಗೆ ಭರವಸೆ ನೀಡಿದರು. ಅರ್ಹರಿಗೆ ಆಶ್ರಯ ಕೊಡುವ ನಿಟ್ಟಲ್ಲಿ ಹೊಸ ಲೇಔಟ್ ನಿರ್ಮಿಸುವ ಯೋಜನೆಗಳ ಕುರಿತು ಮಾತಾಡಿದರು. ಬಿಡಿಎ ಅಭಿವೃದ್ಧಿಯ ಜೊತೆ ಸಂಪನ್ಮೂಲ ಕ್ರೂಢೀಕರಣದತ್ತ ಶ್ರಮಿಸಲಿದ್ದೇನೆ’ ಎಂದರು.
ಪ್ರಾಧಿಕಾರದ ಆಯುಕ್ತ ಎನ್. ಜಯರಾಮ್, ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಜೊತೆಗಿದ್ದು, ಶುಭ ಹಾರೈಸಿದರು.