ಕೋಲ್ಕತ್ತಾ: ಮಂಗಳವಾರ ದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಅಲ್ಲಲ್ಲಿ ಘರ್ಷಣೆ ನಡೆದ ಕುರಿತು ವರದಿಗಳಾಗುತ್ತಿವೆ.
ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ ಜಂಗಿಪುರದ ಮತಗಟ್ಟೆಯಲ್ಲಿ ಟಿಎಂಸಿ (TMC) ಹಾಗೂ ಬಿಜೆಪಿ (BJP) ನಾಯಕರ ಮಧ್ಯೆ ಘರ್ಷಣೆ ನಡೆದ ಕುರಿತು ವರದಿಯಾಗಿದೆ. ಟಿಎಂಸಿ ಬೂತ್ ಅಧ್ಯಕ್ಷ ಗೌತಮ್ ಘೋಷ್ ಮತ್ತು ಹಾಗೂ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಮಧ್ಯೆಯೇ ಈ ಘರ್ಷಣೆ ನಡೆದಿದೆ ಎಂದು ತಿಳಿದು ಬಂದಿದೆ.
ಜಂಗೀಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ವಿರುದ್ಧ ಪ್ರಭಾವ ಬೀರಲು ಟಿಎಂಸಿ ಪ್ರಯತ್ನಿಸಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.
ಈ ಘಟನೆ ಕುರಿತು ಮತಾನಾಡಿದ ಬಿಜೆಪಿ ಅಭ್ಯರ್ಥಿ, ನಾನು ಅಭ್ಯರ್ಥಿಯಾಗಿ ಬಂದಿದ್ದೇನೆ. ಆದರೆ, ಟಿಎಂಸಿ ಕಾರ್ಯಕರ್ತರು ನನಗೆ ಬೆದರಿಕೆ ಹಾಕಿದ್ದಾರೆ. ಅಭ್ಯರ್ಥಿಯನ್ನೇ ಹೀಗೆ ನಡೆಸಿಕೊಂಡರೆ, ಮುಂದೆ ಜನರ ಪರಿಸ್ಥಿತಿ ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿಎಂಸಿ ಕೂಡ ಆರೋಪಿಸಿದ್ದು, ಸಿಆರ್ ಪಿಎಫ್ ಸಿಬ್ಬಂದಿ ಸಹಾಯದಿಂದ ಬಿಜೆಪಿ ಅಭ್ಯರ್ಥಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದೆ.