ಚಿಕ್ಕಮಗಳೂರು: ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.
ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಹುಲ್ಲುಗಾವಲು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ. ಮಸ್ಲಿಂ ಸಮುದಾಯದಿಂದ ಉರುಸ್ ಆಚರಣೆ ವೇಳೆ ಟೆಂಟ್ ಹಾಕಿ ಅಡುಗೆ ಮಾಡುವ ಸಂದರ್ಭದಲ್ಲಿ ಬೆಂಕಿ ತಗುಲಿ ಈ ಘಟನೆ ನಡೆದಿದೆ.
ಬೆಂಕಿಯಿಂದ 2 ಟೆಂಟ್ಗಳು ಕೂಡ ಸಂಪೂರ್ಣ ಭಸ್ಮವಾಗಿದೆ. ಬೆಂಕಿ, ಹುಲ್ಲುಗಾವಲು ಪ್ರದೇಶ ಭಸ್ಮ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಲು ಸ್ಥಳೀಯರಿಂದ ಹರಸಾಹಸ ಪಡಲಾಗಿದೆ.
ಅಡುಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದು ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.