ನಟಿ ಅಕ್ಷಿತಾ ಬೋಪಯ್ಯ ತಮ್ಮ ಬಹುಕಾಲದ ಗೆಳೆಯನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಮಿಸ್ಟರ್ & ಮಿಸ್ಸೆಸ್, ತ್ರಿವಿಕ್ರಮ್ ಸಿನಿಮಾಗಳ ನಟಿ ಅಕ್ಷಿತಾ ಬೋಪಯ್ಯ ಎಂಗೇಜ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಿರುಚಿತ್ರ, ಸಿನಿಮಾವೊಂದರ ಕಾರ್ಯಕಾರಿ ನಿರ್ಮಾಪಕರಾಗಿರುವ ಪ್ರೀತಮ್ ಸುರೇಶ್ ಅವರೊಂದಿಗೆ ಅಕ್ಷಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥದ ಕಾರ್ಯಕ್ರಮ ನಡೆದಿದೆ. ಎರಡು ಕುಟುಂಬಸ್ಥರು ಹಾಗೂ ಆಪ್ತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕೊಡವ ಸಂಪ್ರದಾಯದಂತೆ ಅಕ್ಷಿತಾ ವಿವಾಹವಾಗಿದೆ. ನಟಿಯ ಮದುವೆಯಲ್ಲಿ ಸ್ಯಾಂಡಲ್‌ವುಡ್ ನಟ, ನಟಿಯರು ಮತ್ತು ಗಣ್ಯರು ಭಾಗಿಯಾಗಲಿದ್ದಾರೆ.