ಬಸ್ ಮೇಲೆ ಹೈ ಟೆನ್ಶನ್ ತಂತಿ ಬಿದ್ದ ಪರಿಣಾಮ ಬಸ್ ಹೊತ್ತಿಕೊಂಡು, 6 ಜನ ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಬಸ್ ಮೇಲೆ ಹೈ ಟೆನ್ಶನ್ ವೈರ್ ಬೀಳುತ್ತಿದ್ದಂತೆ ಬೆಂಕಿ ಆವರಿಸಿದೆ. ಈಗ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸದ್ಯದ ಮಾಹಿತಿಯಂತೆ ಘಟನೆಯಲ್ಲಿ 6 ಜನ ದಹನವಾಗಿದ್ದು, ಇನ್ನೂ ಹೆಚ್ಚಿನ ಸಾವು- ನೋವು ಸಂಭವಿಸುವ ಸಾಧ್ಯತೆ ಇದೆ. ಬಸ್ ನಲ್ಲಿದ್ದ ಪ್ರಯಾಣಿಕರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ಮರ್ದಾದಲ್ಲಿ ಈ ಘಟನೆ ನಡೆದಿದೆ. ಬಸ್ ನಲ್ಲಿ 35ಕ್ಕೂ ಅಧಿಕ ಜನರು ಇದ್ದರು ಎನ್ನಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.