ಹಾಟ್ ಬ್ಯೂಟಿ ತಮನ್ನಾ ಭಾಟಿಯಾ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಆಗಮಿಸುತ್ತಿದ್ದಾರೆ.
‘ಅರಣ್ಮನೈ 4’ ಚಿತ್ರದ ಮೂಲಕ ಭಯಾನಕವಾಗಿ ಹಾಟ್ ಬ್ಯೂಟಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದ್ದು, ಮಿಲ್ಕಿ ಬ್ಯೂಟಿಯ ಎಂಟ್ರಿ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ತಮನ್ನಾ ಸದಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಈಗ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನೋಡಗರನ್ನು ಬೆಚ್ಚಿ ಬೀಳಿಸಿದ್ದಾರೆ.
‘ಅರಣ್ಮನೈ 4’ ಸೀಕ್ವೆಲ್ ಸಿನಿಮಾದಲ್ಲಿ ತಮನ್ನಾರ ಕೊಲೆಯಾಗಿರುತ್ತದೆ. ಅವಳ ಸಾವು ಸಹಜ ಅಲ್ಲ ಎಂದು ನಟ, ಡೈರೆಕ್ಟರ್ ಸುಂದರ್ ಸಿ. ಹೇಳುವುದನ್ನು ಟ್ರೈಲರ್‌ನಲ್ಲಿ ನೋಡಬಹುದು. ತಂಗಿಯ ಸಾವಿಗೆ ಅಸಲಿ ಕಾರಣವೇನು ಎಂದು ಹುಡುಕುವ ಲಾಯರ್ ಪಾತ್ರದಲ್ಲಿ ಸುಂದರ್ ಸಿ. ನಟಿಸಿದ್ದಾರೆ. ಸಿನಿಮಾ ಕಥೆ ಮತ್ತು ನಿರ್ದೇಶನ ಕೂಡ ಸುಂದರ್ ಸಿ. ಅವರೇ ಮಾಡಿದ್ದಾರೆ.
ಚಿತ್ರದಲ್ಲಿ ನಟಿ ರಾಶಿ ಖನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿ ಬಾಬು, ಕನ್ನಡದ ನಟ ಗರುಡ ರಾಮ್ ಕೂಡ ನಟಿಸಿದ್ದಾರೆ. ಖುಷ್ಬೂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಏ. 11ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.