ಒಂದೇ ವ್ಯೆಕ್ತಿ ಎರಡೂವರೆ ಸಾವಿರಕ್ಕೂ ಹೆಚ್ಚು ಲೈಂಗಿಕ ವಿಡಿಯೋದಲ್ಲಿ ಕಾಣಿಸಿಕೊಂಡು, ಈ ರಾಜ್ಯ ಕಂಡು-ಕೇಳರಿಯದ ಮಟ್ಟಿಗೆ ಅಸಹ್ಯವಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾಲೇಜು ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ಶುರುವಿಟ್ಟಿದ್ದಾರೆ. ಈ “ವಿಕೃತ ಕಾಮುಕನಿಗೆ ತಕ್ಕ ಶಿಕ್ಷೆಯಾಗಲಿ” ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರಿನ ಮಹಾರಾಣಿ ಕಾಲೇಜಿನ ಹೆಣ್ಣು ಮಕ್ಕಳು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಇಂತಹ ಪ್ರಕರಣ ಹೆಚ್ಚಿದರೇ, ಹೆಣ್ಣು ಭೋಗದ ವಸ್ತುವಾದಾಳು? ಎಂಬ ಆತಂಕದಲ್ಲೇ ಇಂದು ಬೆಳ್ಳಂಬೆಳಿಗ್ಗೆ ಬೀದಿಗಿಳಿದು, ಪ್ರಜ್ವಲ್ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಆತನ ಭಾವ ಚಿತ್ರಕ್ಕೆ ಪಟ-ಪಟನೆ ಚಪ್ಪಲಿಯಿಂದ ಬಾರಿಸಿದರು!. ಆ ಮೂಲಕ “ಮಾನಗೆಟ್ಟ, ನೀಚ ಕೃತ್ಯವೆಸಗಿದ ಕಾಮುಕನಿಗೆ ತಕ್ಕ ಶಿಕ್ಷೆಯಾಗಿ, ಗಲ್ಲಿಗೇರುವಂತಾಗಲಿ” ಎಂದು ಕೂಗಿ,ಕೂಗಿ ನೋವು ಹೊರ ಹಾಕಿದರು. ಮಹಿಳೆಯರನ್ನು ಆಮಿಷಕ್ಕೊಳಪಡಿಸಿ, ತಮ್ಮ ಕಾಮದಾಟಕ್ಕೆ ಬಲಿ ಪಡೆವ ಇಂಥವರನ್ನು, ನ್ಯಾಯಾಲಯ ಗಲ್ಲಿಗೇರಿಸಲಿ. ಆ ಮೂಲಕ ನೊಂದ ಹೆಣ್ಣು ಮಕ್ಕಳ ಕಣ್ಣೀರು ಒರೆಸಲಿ” ಎಂದು ಆಗ್ರಹಿಸಿದರು.
ಇಂಥ ನೀಚ ಕೃತ್ಯ ಇನ್ನೆಂದೂ ನಡೆಯದಿರಲಿ. ಹೆಣ್ಣನ್ನು ಮನುಷ್ಯರಂತೆ ಕಾಣಿರಿ. ಹೆಣ್ಣನ್ನು ಗೌರವಿಸಿ.