ರಾಜ್ಯಾದಾದ್ಯಂತ ಹರಿದಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಹರಿಹಾಯ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದು ದೇಶವೇ ತಲೆ ತಗ್ಗಿಸುವ ವಿಷಯ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಮಾತನಾಡಿದ ಇವರು ‘ಮಹಿಳಾ ಆಯೋಗದವರು ನೀಡಿದದ್ದಾರೆ. ಪೆನ್ ಡ್ರೈವ್ ಮೂಲಕ ಪ್ರಜ್ವಲ್ ಅತ್ಯಾಚಾರ ಎಸಗಿರುವು ಸ್ಪಸ್ಟವಾಗಿದೆ. ಇದು ಅಕ್ಷಮ್ಯ ಅಪರಾಧ, ಸರಕಾರ ನೋಡಿಕೊಳ್ಳುತ್ತದೆ” ಎಂದರು. “ಪ್ರಜ್ವಲ್ ರೇವಣ್ಣ ಈಗಾಗಲೇ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಇದು ದೇಶವೇ ತಲೆ ತಗ್ಗಿಸುವ ವಿಷಯ ಎಂದು ಡಿಕೆಶಿ ಹರಿಹಾಯ್ದರು. ಈ ಬಗ್ಗೆ ಸಂತ್ರಸ್ತರು ದೂರು ಕೊಟ್ಟಿದ್ದಾರೆ ತನಿಖೆ ನಡೆಸಲಾಗುತ್ತಿದೆ” ಎಂದರು.
ಇನ್ನುಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸರ್ಕಾರದ ವತಿಯಿಂದ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಇತ್ತ ಆರೋಪಿ ಪ್ರಜ್ವಲ್ ರೇವಣ್ಣ , ಶನಿವಾರ ಮುಂಜಾನೆ ಮೂರರ ಹೊತ್ತಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಫ್ತಾನ್ಸಾ ಏರ್ ಲೈನ್ಸ್:(LH 755 ) ಮೂಲಕ ಜರ್ಮನಿಯ ಫ್ರಾಂಕ್ ಫರ್ಟ್ ಗೆ ಹೋಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
