ಪಾಕ್ ದೇಶದ 2ನೇ ದೊಡ್ಡ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಅಲ್ಲದೇ, ಈ ವೇಳೆ ಪಾಕ್ ನ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆ ಮಾಡಿವೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಹಾಗೂ ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾಗಿ ಬಂದಿದ್ದ ಭಯೋತ್ಪಾದಕರು ಟರ್ಬತ್ ನಲ್ಲಿನ ಪಾಕ್ ನೌಕಾ ಕೇಂದ್ರ ಪಿಎನ್‌ಎಸ್ ಸಿದ್ದಿಕಿ ಮೇಲೆ ದಾಳಿ ನಡೆಸಿದ್ದಾರೆ.
ಘರ್ಷಣೆಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳಿಗೆ ಯಾವುದೇ ನಷ್ಟವಾಗಿಲ್ಲ ಎಂದು ಹೇಳಲಾಗಿದೆ. ಭಯೋತ್ಪಾದಕರು ಹತರಾದ ನಂತರ ಭದ್ರತಾ ಪಡೆಗಳು ಪ್ರದೇಶ ಸುತ್ತುವರೆದು ಶೋಧ ಕಾರ್ಯಾಚರಣ ಆರಂಭಿಸಿವೆ. ದಾಳಿಯಲ್ಲಿ ಆರು ಭಯೋತ್ಪಾದಕರು ಇದ್ದರು. ಆದರೆ, ಇಬ್ಬರು ತಪ್ಪಿಸಿಕೊಂಡಿದ್ದಾರೆ ಎದು ಹೇಳಲಾಗುತ್ತಿದೆ.
ಟರ್ಬತ್‌ನಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ದ ಮಜೀದ್ ಬ್ರಿಗೇಡ್ ವಹಿಸಿಕೊಂಡಿದೆ. ಪಾಕಿಸ್ತಾನ ಸರ್ಕಾರವು ಬಿಎಲ್ ಓನ್ನು ನಿಷೇಧಿಸಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಪ್ರಮುಖ ಗ್ವಾದರ್ ಬಂದರಿನಲ್ಲಿ ಪಿ ಸಿದ್ದಿಕಿ ನೌಕಾ ವಿಮಾನ ನಿಲ್ದಾಣವಿದೆ. ಇದರ ಅಡಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ರಸ್ತೆಗಳು ಮತ್ತು ಇಂಧನ ಯೋಜನೆಗಳು ನಿರ್ಮಾಣವಾಗಲಿವೆ. ಇದು ಚೀನಾದ ಯೋಜನೆಯಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ನ ಭಾಗ. ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಯನ್ನು ಮಜೀದ್ ಬ್ರಿಗೇಡ್ ವಿರೋಧಿಸುತ್ತಿದೆ. ಚೀನಾ ಹಾಗೂ ಪಾಕ್ ಈ ಪ್ರದೇಶದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎನ್ನುವುದು ವಾದ. ಹೀಗಾಗಿ ಮಜೀದ್ ಬ್ರಿಗೇಟ್ ಈ ರೀತಿ ದಾಳಿ ನಡೆಸುತ್ತಲೇ ಇದೆ.