ಪೋಕ್ಸೋ ಕೇಸಲ್ಲಿ 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಮುರುಘಾಶ್ರೀ ಬಂಧನವಾಗಿತ್ತು. ಮಠದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತು ಸುಮಾರು ಹದಿನಾಲ್ಕು ತಿಂಗಳು ಜೈಲುವಾಸ ಅನುಭವಿಸಿ, ಶರತ್ತು ಬದ್ಧ ಜಾಮೀನು ಪಡೆದು, 2023ರ ನವೆಂಬರ್ ತಿಂಗಳ 16ನೇ ತಾರೀಖು ಮುರುಘಾ ಹೊರಬಂದಿದ್ದರು. ಇದೀಗ ಕಳೆದ ಇಪ್ಪತ್ತೆರಡನೇ ತಾರೀಕು ರಿಜಿಸ್ಟರ್ ಆದ ಪೋಕ್ಸೋ ಕೇಸಿನ ವಿಚಾರಣೆ ನಡೆಸಿದ ಕೋರ್ಟ್, ವಾರದೊಳಗೆ ಬಂದು ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶಿಸಿತ್ತು. ಅದರಂತೆ ಇಂದು (29 ಎಪ್ರೀಲ್) ಮುರುಘಾ, ಚಿತ್ರದುರ್ಗ ಸ್ಥಳೀಯ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.
ಏನೇ ಹೇಳಿ, “ಈ ಪ್ರಕರಣ ಬೆಳಕಿಗೆ ಬಂದು ಸ್ವಾಮಿಜಿಗಳಲ್ಲದೇ ಇಡೀ ಹಿಂದೂ ಸಮಾಜವೇ ತಲೆತಗ್ಗಿಸುವಂತಾಗಿದೆ. ಅಪ್ರಾಪ್ತ ಹೆಣ್ಣು ಮಕ್ಕಳನ್ನು ತನ್ನ ಕಾಮ ತೃಷೆಗಾಗಿ ಹುರಿದು ಮುಕ್ಕಿದ ಈ ಪಾಪಿ ಮುರುಘನಲ್ಲ; ಮೃಗ ಎನ್ನುವಷ್ಟರ ಮಟ್ಟಿಗೆ ಜನ ರೊಚ್ಚಿಗೆದ್ದಿದ್ದರು. ಇಷ್ಟಾಗಿಯೂ ಸ್ವಾಮಿಜಿ ತನ್ನ
ಮಠದ ಪ್ರಭಾವ ಮತ್ತು ಹಣದ ಬಲದಲ್ಲಿ ಬದುಕಿದ್ದಾರೆ” ಎಂಬುದು ಹಲವರ ಅನಿಸಿಕೆಯಾಗಿದೆ. ಅದೇನೇ ಇರಲಿ, ಸದ್ಯ ಶರಣಾಗಿರುವ ಸ್ವಾಮಿಗೆ, ಮೇ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.