ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮನೆಗೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಜ್ಯೂ. ಎನ್ ಟಿಆರ್ ಭೇಟಿ ನೀಡಿದ್ದು, ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ.
ಕೆಜಿಎಫ್ 2 ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಮನೆಯಲ್ಲಿನ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ್ಯೂ. ಎನ್ ಟಿಆರ್ ದಂಪತಿ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಖುಷಿಯಾದ ಸಮಯ ಕಳೆದಿದ್ದಾರೆ. ಈ ವೇಳೆ ಕಾಂತಾರ ಸ್ಟಾರ್ ರಿಷಬ್ ಮತ್ತು ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ.
ಆದರೆ, ಪ್ರಶಾಂತ್ ನೀಲ್ ಅವರ ಮನೆಯಲ್ಲಿ ಯಾವ ಕಾರ್ಯಕ್ರಮ ಇತ್ತು ಎಂಬುವುದು ತಿಳಿದು ಬಂದಿಲ್ಲ. ಹೊಂಬಾಳೆ ಸಂಸ್ಥೆ ಮಾಲೀಕ ವಿಜಯ್ ಕಿರಗಂದೂರು ಕೂಡ ಭಾಗಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ದೇವರ ಚಿತ್ರದ ನಂತರ ನೀಲ್ ಜೊತೆ ಹೊಸ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ, ಈ ಭೇಟಿ ಗಮನಿಸಿ, ಇಬ್ಬರೂ ಸೇರಿ ಚಿತ್ರ ಮಾಡಬಹುದು ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.