ಚಿಕ್ಕೋಡಿ: ನಿಮ್ಮ ರಾಮಮಂದಿರ ಸ್ಪೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಎಂದು ಅಲ್ಲಾಹು ಅಕ್ಬರ್ ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಬೆಳಕಿಗೆ ಬಂದಿದೆ.
ರಾಮಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಪತ್ರ ಬರೆದು ಮಂದಿರದಲ್ಲಿ ಅನಾಮಧೇಯ ದುಷ್ಕರ್ಮಿಗಳು ಬಿಟ್ಟು ಹೋಗಿದ್ದಾರೆ. ಈ ಪತ್ರಗಳು ಫೆಬ್ರವರಿ 7 ಹಾಗೂ 28ರಂದು ಬಂದವೆ ಎನ್ನಲಾಗಿದ್ದು, ಈಗ ಬೆಳಕಿಗೆ ಬಂದಿವೆ.
ಮಾರ್ಚ್ 20-21ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಉಲೇಖಿಸಲಾಗಿದೆ. 101 ವರ್ಷಗಳ ಇತಿಹಾಸ ಹೊಂದಿರುವ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನ ಸ್ಫೋಟಿಸುವದಾಗಿ ಬೆದರಿಕೆ ಹಾಕಿದ್ದಾರೆ. ಈ ಪತ್ರಗಳು ಹನುಮ ಮಂದಿರ ಹಾಗೂ ರಾಮನ ಗರ್ಭಗುಡಿಯಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಂದಿರಕ್ಕೆ ಸಿಸಿಟಿವಿ ಅಳವಡಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.