ಚಾಮರಾಜನಗರದ ಹೆಗ್ಗವಾಡಿಯ ಅಂಬೇಡ್ಕರ್ ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶ ನಡೆದಿತ್ತು. ಸಿಎಂ ಸಿದ್ದರಾಮಯ್ಯ ತಮ್ಮ ಗ್ಯಾರಂಟಿ ಸಾಧನೆ ಕುರಿತು ಭರ್ಜರಿ ಭಾಷಣ ಮಾಡಿದರು. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಬಹಳ ಹುಮ್ಮಸ್ಸಿನಿಂದಲೇ ಮಾತನಾಡಿದರು.
ನಂತರ ಮಾತಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತು ಮುಂದುವರೆಸಿದ್ರು. ನಮ್ಮ ಸರ್ಕಾರ ಮಹಿಳೆಯರಿಗೆ 2 ಸಾವಿರ ಪ್ರತಿ ತಿಂಗಳು ನೀಡುತ್ತಿದೆ. ಯಾವ ತಿಂಗಳೂ ಸಹ ಮಿಸ್ ಆಗಿಲ್ಲ. ಪ್ರತಿ ತಿಂಗಳೂ 2 ಸಾವಿರ ರೂಪಾಯಿ ಬರ್ತಿದೆ ಅಲ್ವಾ? ಎಂದು ಪ್ರಶ್ನಿಸಿದ್ರು. ಗೃಹಲಕ್ಷ್ಮೀ ಹಣ ಯಾರಾರು ಪಡೆಯುತ್ತಿದ್ದೀರಿ? ಹಣ ಪಡೆದ ಮಹಿಳೆಯರು ಕೈ ಎತ್ತಿ ಎಂದು ಮಹಹಿಳೆಯರಲ್ಲಿ ಕೇಳಿಕೊಂಡ್ರು. ಈ ವೇಳೆ ಗುಂಪಿನಲ್ಲಿ ನಿಂತ ಕೆಲ ಮಹಿಳೆಯರು ಇದುವರೆಗೂ ಒಂದು ಪೈಸೆ ಹಣ ಬಂದಿಲ್ಲ ತಮ್ಮಅಳಲು ಹೇಳತೊಡಗಿದರು.
ಇದರಿಂದ ಸಚಿವ ಎಚ್.ಸಿ ಮಹದೇವಪ್ಪ ತೀವ್ರ ಮುಜುಗರ ಅನುಭವಿಸುವಂತಾಯ್ತು. ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲಎಂಭ ಆರೋಪಗಳಿಗೆ ಪುಷ್ಠಿ ಸಿಕ್ಕಂತಾಯ್ತು. ಇನ್ನು ಮುಂದಾದರೂ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಅನ್ನೋ ಆಗ್ರಹವೂ ಸಮಾರಂಭದಲ್ಲಿ ಕೇಳಿಬಂತು