ರಾಜ್ಯ ಸರಕಾರಕ್ಕೆ ಸವಾಲಾದ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರೀಯೆಯಲ್ಲಿ ಶಾಸಕರನ್ನ ಆಯ್ಕೆ ಮಾಡಿದ ನಂತರದಲ್ಲಿ ಕಾರ್ಯ ಕರ್ತರ ಆಯ್ಕೆ ಕಗ್ಗಂಟಾಗಿ ಕೂತಿತ್ತು. ಈ ಹಿಂದೆ ರಾಜ್ಯದಿಂದ ಒಪ್ಪಿಗೆಗಾಗಿ ಹೈಕಂಳಮಾಂಡಿಗೆ ಕಳುಹಿದ್ದ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಪಟ್ಟಿ ರಿಜೆಕ್ಟ್ ಮಾಡಿ ಹೊಸ ಪಟ್ಟಿ ತಯಾರಿಸಿ ತರುವಂತೆ ಸೂಚಿಸಿದ್ದರು. ಚುನಾವಣೆಯಲ್ಲಿ ಶ್ರಮಿಸಿದ ಪ್ರಮುಖ ಕಾರ್ಯಕರ್ತರನ್ನ ಆಯ್ಕೆಗೊಳಿಸುವಂತೆ ಖಡಕ್ ಆಗಿ ಹೇಳಿ ಕಳುಹಿಸಿದ್ದ ಪರಿಣಾಮ ಅಧ್ಯಕ್ಷರ ಆಯ್ಕೆ ಒಮ್ಮತಕ್ಕೆ ಬಂದಿರಲಿಲ್ಲ. ಈ ಬಗ್ಗೆ ನಿನ್ನೆ (30) ತಡ ರಾತ್ರಿ ಮಾತುಕತೆಗೆ ಸೇರಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೊನೆಗೂ 36 ಪ್ರಮುಖರನ್ನು ನಿಗಮ ಮಂಡಳಿಯ ಅಧ್ಮಕ್ಷ ಗಾದಿಗೆ ನಾಮ ನಿರ್ದೇಶನ ಮಾಡಲು ನಿರ್ಧರಿಸಿದರು ಎನ್ನಲಾಗಿದೆ. ಕಳೆದ ಚನಾವಣೆ ಸಮಯದಲ್ಲಿ ಟಿಕೇಟು ಹಂಚಿಕೆಯಲ್ಲಿ ಅಸಮಾಧಾನ ಹೊಂದಿದ್ದವರನ್ನೂ ಸಹ ಹೊಸ ಪಟ್ಟಿಗೆ ಸೇರಿಸಲಾಗಿದೆ ಎನ್ನಲಾಗ್ತಿದೆ. ಸುದೀರ್ಘ ಸಮಾಲೋಚನೆಯ ನಂತರದಲ್ಲಿ ಈ ಹೊಸ ಪಟ್ಟಿ ಸಿದ್ಧಗೊಂಡಿದ್ದು, ಬಹಳಷ್ಟು ಅಳೆದು-ತೂಗಿ ನಾಮ ನಿರ್ದೇಶಿಸಲಾಗಿದೆ.ಒಟ್ಟಾರೆಯಾಗಿ ವಿವಿಗಳಲ್ಲಿ ಸೀಟು ಹಂಚಿಕೆಗಳಲ್ಲಿ ನಡೆದು ಬರುತ್ತಿದ್ದ ಅಕ್ರಮ ತಡೆಯಲು, ಉನ್ನತ ಶಿಕ್ಷಣ ಇಲಾಖೆಯ ತೆಗೆದುಕೊಂಡ ಮಹತ್ವದ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ನೈಜ ಪ್ರತಿಭೆಗಳಿಗೆ ಸಹಾಯವಾಗಲಿದೆ