ಇತ್ತೀಚೆಗಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್(76) ತಡರಾತ್ರಿ 1:20ಕ್ಕೆ ತೀವೃ ಹೃದಯಾಘಾತದಿಂದ ಇಹಲೋಕ ತ್ಯೇಜಿಸಿದ್ದಾರೆ.
ಬಹು ಅಂಗಾಂಗ ವೈಪಲ್ಯತೆ ಹೊಂದಿದ್ದ ಇವರಿಗೆ, ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ತಡರಾತ್ರಿ ಚಿಕಿತ್ಸೆ ಫಲಿಸದೆ ಶ್ರೀನಿವಾಸ್ ಪ್ರಸಾದ್ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರ ಪುತ್ರಿ ಪ್ರತಿಮಾ ಪ್ರಸಾದ್ “ಅಪ್ಪ ಯಾವಾಗಲೂ ನಗ-ನಗುತ್ತಲೇ ಇದ್ದ ವ್ಯೆಕ್ತಿ. ನಾನು ಸತ್ತಾಗ ನನಗೆ ಕಣ್ಣೀರ ವಿದಾಯ ಬೇಡ; ನಗುತ್ತಲೇ ಬೀಳ್ಕೋಡಿ” ಎಂದಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರನ್ನು ಕಳುಹಿಸಿಕೊಡೋಣ” ಎಂದು ಮನವಿ ಮಾಡಿದರು.
ಅಂದಹಾಗೆ, ಮೈಸೂರು, ಚಾಮರಾಜ ನಗರ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದ ಶ್ರೀನಿವಾಸ್ ಪ್ರಸಾದ್ ಖಡಕ್ ಮಾತಿನ ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರು ಮಾಡಿದ್ದವರು. ಇವರು, ಚಾಮರಾಜ ನಗರ ಮೀಸಲು ಕ್ಷೇತ್ರದ ಮೂಲಕ ಆರು ಬಾರಿ ಸಂಸದರಾಗಿ ಮತ್ತು ಎರಡು ಬಾರಿ ನಂಜನಗೂಡಿನ ಶಾಸಕರಾಗಿ ಆಯ್ಕೆಯಾಗಿದ್ದವರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿ ಸೇವೆಗೈದಿದ್ದರು. ಕಳೆದ 2016 ರಲ್ಲಿ ಮರಳಿ ಬಿಜೆಪಿ ಸೇರಿಕೊಂಡು, ಮರಳಿ ಚಾಮರಾಜನಗರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೆಯೇ ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆದಿದ್ದರು. ಈ ಪ್ರಭಾವಿ ದಲಿತ ನಾಯಕನ ವಿದಾಯಕ್ಕೆ ಅವರ ಕುಟುಂಬಸ್ಥರು, ನಾಡಿನ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿ, ಕಂಬನಿ ಮಿಡಿಯುತ್ತಿದ್ದಾರೆ.