ಕಲಾವಿದರೊಬ್ಬರು ನಟನೆ ಮಾಡುತ್ತ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಲಹಂಕದ ಸಾತನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 72ರ ವಯಸ್ಸಿನ ಎನ್.ಮುನಿಕೆಂಪಣ್ಣ (N. Munikempanna) ಎಂಬುವವರೇ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ವೇದಿಕೆ ಮೇಲೆಯೇ ಶಕುನಿ (Shakuni) ಪಾತ್ರ ನಿರ್ವಹಿಸುತ್ತಿರುವ ಸಂದರ್ಭದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮಧ್ಯರಾತ್ರಿಯವರೆಗೂ ಅದ್ಭುತವಾಗಿಯೇ ನಾಟಕ (Drama) ಪ್ರದರ್ಶನವನ್ನು ಮುನಿಕೆಂಪಣ್ಣ ಮಾಡಿದ್ದರು. ಆದರೆ, ಮಧ್ಯರಾತ್ರಿ 1 ಗಂಟೆ ವೇಳೆ ನಾಟಕ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದಾರೆ. ಇವರು ನಿವೃತ್ತ ಉಪನ್ಯಾಸಕರೂ ಆಗಿದ್ದಾರೆ. ದೇವನಹಳ್ಳಿಯಲ್ಲಿ ನಡೆದ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅವರಿಗೆ ಹೃದಯಾಘಾತವಾಗಿದ್ದರಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿದೆ.