ಬಳ್ಳಾರಿ: ಟಿಕೆಟ್ ಘೋಷಣೆಯಾದ ಬೆನ್ನಲ್ಲಿಯೇ ಶ್ರೀರಾಮುಲು ನಾಗಸಾಧುವನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿರುವ ದೇವರಕೊಳ್ಳ ಮಠದ ಜೋಗದ ದಿಗಂಬರ ರಾಜ ಭಾರತಿ ನಾಗಸಾಧು ಶ್ರೀರಾಮುಲು ಭೇಟಿ ಮಾಡಿದ್ದಾರೆ. ಟಿಕೆಟ್ ಖಚಿತವಾದ ನಂತರ ನಾಗ ಸಾಧು ಆಶೀರ್ವಾದ ಪಡೆದ ಶ್ರೀರಾಮುಲು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಡಿಕೆಶಿ ಶಿವಕುಮಾರ್ ಸೇರಿದಂತೆ ಅನೇಕರು ಈ ಸಾಧುವನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ.