ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಇಂದೂ ಕೂಡ ಸಾಕ್ಷಿ ದೂರುದಾರ ತೋರಿಸುತ್ತಿರುವ ಸ್ಥಳಗಳಲ್ಲಿ ಉತ್ಖನನ ಕಾರ್ಯ ಮುಂದುವರಿಸಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿರುವ ಹೆದ್ದಾರಿ ಪಕ್ಕದ ಕಾಡಿಗೆ ಎಸ್.ಐ.ಟಿ ತಂಡ ಸಾಕ್ಷಿ ದೂರುದಾರನನ್ನು ಕರೆದುಕೊಂಡು ಹೋಗಿದ್ದಾರೆ.
ಎಸ್.ಐ.ಟಿ ಜೊತೆಗೆ ಸುಮಾರು 20 ಕಾರ್ಮಿಕರು ಶೋಧ ಕಾರ್ಯಕ್ಕೆ ಕಾಡಿನೊಳಗೆ ತೆರಳಿದ್ದಾರೆ. ಅಗೆಯುವ ಯಂತ್ರವನ್ನೂ ಕೊಂಡೊಯ್ಯಲಾಗಿದೆ.


















