ಸದ್ಯ ರಾಜ್ಯ ಸೇರಿದಂತೆ ದೇಶದಲ್ಲಿ ರಣ ಬಿಸಿಲು ಕಾಡುತ್ತಿದೆ. ಬೇಸಿಗೆಯ ತಾಪಮಾನವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಈ ಬಿಸಿ ಅನುಭವ ದೇಹಕ್ಕೆ ಸಂಕಟ ತರುತ್ತರೆ. ಸಮಯದಲ್ಲಿ ಪೋಷಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಬಗ್ಗೆಯು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಹದಗೆಡುತ್ತದೆ.
ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಅತಿಯಾದ ಬೆವರುವಿಕೆ ಹಾಗೂ ನೀರಿನ ನಷ್ಟವು ನಿರ್ಜಲೀಕರಣಕ್ಕೆ ಕಾರಣವಾಗುವುದಲ್ಲದೆ ಮತ್ತಷ್ಟು ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಮಕ್ಕಳಿಗೆ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ನೀಡಿ. ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಬೇಕು.
ಬೇಸಿಗೆಯಲ್ಲಿ ಸುಡು ಬಿಸಿಲಿನ ನಡುವೆ ಸೆಕೆ ವಿಪರೀತವಾಗಿರುತ್ತದೆ. ಈ ಸಮಯದಲ್ಲಿ ದಪ್ಪನೆಯ ಬಟ್ಟೆಯು ಧರಿಸುವುದರಿಂದ ಕಿರಿಕಿರಿಯಾಗಬಹುದು. ಮಕ್ಕಳು ಕಂಫರ್ಟ್ ಆಗಿರಲು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು. ಹತ್ತಿಯ ಉಡುಪು ಮಕ್ಕಳಿಗೆ ಈ ಆರಾಮದಾಯಕರಾಗಿರುತ್ತಾರೆ.
ಹೆಚ್ಚಿನ ತಾಪಮಾನದಿಂದಾಗಿ ಜೀರ್ಣಕ್ರಿಯೆಯು ನಿಧಾನವಾಗುತ್ತದೆ. ಮಕ್ಕಳಿಗೆ ಮಸಾಲೆಯುಕ್ತ ಹಾಗೂ ಕರಿದ ಆಹಾರ ಪದಾರ್ಥ ತಪ್ಪಿಸಬೇಕು. ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಎದುರಾಗಬಹುದು. ಬೇಸಿಗೆಯಲ್ಲಿ ಸಿಗುವ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಮಕ್ಕಳ ಆಹಾರ ಪಟ್ಟಿಯಲ್ಲಿ ಸೇರಿಸಿದರೆ ಪೋಷಕರಾಗಿ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ.
ಬೇಸಿಗೆಯಲ್ಲಿ ಮಕ್ಕಳಿಗೆ ರಜಾ ಇರುವುದರಿಂದ ಹೊರಗಡೆ ಹೋಗಿ ಆಡಲು ಇಷ್ಟ ಪಡುತ್ತಾರೆ. ಬಿಸಿಲಿನ ಝಳವು ಹೆಚ್ಚಾಗಿರುವ ಕಾರಣ ಹೊರಾಂಗಣ ಆಟಕ್ಕೆಂದು ಮಕ್ಕಳನ್ನು ಹೊರಗಡೆ ಕಳುಹಿಸಬೇಡಿ. ಪಾಲಕರು ಕೆಲವು ಒಳಾಂಗಣ ಚಟುವಟಿಕೆ ಆಯೋಜಿಸಿ.
ಬಿಸಿಲಿನಲ್ಲಿ ಪಾರ್ಕ್ ಮಾಡಿರುವ ಕಾರಿನೊಳಗೆ ಮಕ್ಕಳನ್ನು ಬಿಡುವುದು ಒಳ್ಳೆಯದಲ್ಲ. ಬಿಸಿಲಿನ ತಾಪಮಾನಕ್ಕೆ ವಾಹನಗಳು ಬೇಗ ಬಿಸಿಯಾಗುತ್ತದೆ. ಮಕ್ಕಳು ಈ ವಾಹನದಲ್ಲಿದ್ದರೆ ತೊಂದರೆಯಾಗಬಹುದು.
ಮಕ್ಕಳನ್ನು ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಕೂಡಿ ಹಾಕಲು ಸಾಧ್ಯವಿಲ್ಲ. ಸಂಜೆಯ ಸಮಯದಲ್ಲಾದರೂ ನಿಮ್ಮ ಕಣ್ಣು ತಪ್ಪಿಸಿ ಮಕ್ಕಳು ಆಟವಾಡಲು ಹೋಗಬಹುದು. ಮಕ್ಕಳು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವ ಕಾರಣ ಸನ್ ಸ್ಕ್ರೀನ್ ಬಳಸುವಂತೆ ನೋಡಿಕೊಳ್ಳಿ. ಹಾನಿಕಾರಕ ಯುವಿ ಕಿರಣಗಳಿಂದ ಅವರ ಕಣ್ಣುಗಳನ್ನು ರಕ್ಷಿಸಲು ಸನ್ ಗ್ಲಾಸ್ ನೀಡುವುದು ಒಳ್ಳೆಯದು.
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡು ಬಂದರೂ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.