ನವದೆಹಲಿ: ದೇಶದಲ್ಲಿ ಲೋಕಸಭೆ ಕಾವು ಜೋರಾಗಿದ್ದು, ಪ್ರಧಾನಿ ಮೋದಿ ಮೋದಿ ದಂಡಯಾತ್ರೆ ಆರಂಭಸಿದ್ದಾರೆ. ಈಗಾಗಲೇ ಉತ್ತರ ಭಾರದಲ್ಲಿ ಸಂಚರಿಸಿದ್ದ ಅವರು, ಈಗ ದಕ್ಷಿಣದತ್ತ ಮುಖ ಮಾಡಿದ್ದಾರೆ.
ಬಿಜೆಪಿ ಈ ಬಾರಿ 400 ಸೀಟುಗಳನ್ನು ಪಡೆಯಬೇಕು. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಅಜೆಂಡಾದೊಂದಿಗೆ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದೆ. ಈಗಾಗಲೇ ಉತ್ತರ ಭಾರತದಲ್ಲಿ ಮತಬೇಟೆ ಆರಂಭಿಸಿರುವ ಪ್ರಧಾನಿ ಮೋದಿ ಕೆಲವೇ ದಿನಗಳಲ್ಲಿ ದಕ್ಷಿಣದ ರಾಜ್ಯಗಳತ್ತ ಆಗಮಿಸಲಿದ್ದಾರೆ. ಮಾರ್ಚ್ 15ರಿಂದ 19ರವರೆಗೆ ದಕ್ಷಿಣ ಭಾರತದಲ್ಲಿ ಮೋದಿ 15 ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಬಾಗವಹಿಸಲಿದ್ದಾರೆ.
ದಕ್ಷಿಣ ಭಾರತದ ಮೋದಿ ಪ್ರವಾಸ ಪಟ್ಟಿ
• ಮಾರ್ಚ್ 15 – ಕೋಲಾರ, ಸೇಲಂ, ಪಾಲಕ್ಕಾಡ್
• ಮಾರ್ಚ್ 16 – ಕನ್ಯಾಕುಮಾರಿ, ವಿಶಾಖಪಟ್ಟಣಂ, ಜಹೀರಾಬಾದ್
• ಮಾರ್ಚ್ 17 – ಪತ್ತನಂತ್ತಿಟ್ಟ, ಶಿವಮೊಗ್ಗ, ಅಮರಾವತಿ
• ಮಾರ್ಚ್ 18 – ಮಲ್ಕಾಜ್ಗಿರಿ, ಬೀದರ್, ಕೊಯಮತ್ತೂರು
• ಮಾರ್ಚ್ 19- ನಾಗರ್ ಕರ್ನೂಲ್, ಧಾರವಾಡ, ಏಲೂರು
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೂಡ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆ, ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 17ರಂದು ಶಿವಮೊಗ್ಗದಲ್ಲಿ ರ್ಯಾಲಿ ನಡೆಯಲಿದ್ದು, 4 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಸಮಾವೇಶ ಆಯೋಜಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಮೋದಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.
ಇನ್ನೇನು ಕೆಲವು ದಿನಗಳಲ್ಲಿ ಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ದಂಡಯಾತ್ರೆ ನಡೆಸಲಿದ್ದಾರೆ