ಭೋಪಾಲ್: ಯಾರಿಗೆ ಹೇಳಿದರೂ ಸರಿಯಾಗ ಕೆಲಸ ಮಾಡದ ಹಿನ್ನೆಲೆಯಲ್ಲಿ ಕೌನ್ಸಿಲರ್ ಒಬ್ಬರು ತಾವೇ ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು.
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬಿಜೆಪಿ ಕೌನ್ಸಿಲರ್ ಈ ಕಾರ್ಯ ಮಾಡಿದ್ದಾರೆ. ತಮ್ಮ ಪ್ರದೇಶದಲ್ಲಿ ಬಂದ್ ಆಗಿ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸ್ವತಃ ತಾವೇ ಕ್ಲೀನ್ ಮಾಡಿದ್ದಾರೆ. ನಗರದ ಬಿರ್ಲಾನಗರದಲ್ಲಿರುವ ಚರಂಡಿಯನ್ನು ವಾರ್ಡ್ 15ರ ಪಾಲಿಕೆ ಸದಸ್ಯ ದೇವೇಂದ್ರ ರಾಠೋಡ್ ಸ್ವಚ್ಛಗೊಳಿಸಿದ ವ್ಯಕ್ತಿ. ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಮುನ್ಸಿಪಲ್ ಕಾರ್ಪೊರೇಷನ್ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸ್ವತಂ ರಾಠೋಡ್ ತಾವೇ ಗುಂಡಿಗೆ ಇಳಿದು ಕ್ಲೀನ್ ಮಾಡಿದ್ದಾರೆ. ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನಂತರ ಪಾಲಿಕೆ ತಂಡ ಆಗಮಿಸಿ ಸ್ವಚ್ಛಗೊಳಿಸಿದೆ.
ಜನರು ನನಗೆ ಮತ ನೀಡಿದ್ದಾರೆ, ಅವರ ಮತಕ್ಕೆ ಬೆಲೆ ನೀಡಬೇಕು. ಹೀಗಾಗಿ ನಾನೇ ಚರಂಡಿಗೆ ಇಳಿದು ಸ್ವಚ್ಛ ಮಾಡಿದ್ದೇನೆ ಎಂದು ಹೇಳಿದ್ದಾರೆ.