ಕಾರವಾರ: ಮಹಿಳೆಯೊಬ್ಬರು ಪತಿಯ ಮೇಲಿನ ಸಿಟ್ಟಿಗೆ 6 ವರ್ಷದ ಮಗುವನ್ನೇ ಮೊಸಳೆಗಳಿದ್ದ ನಾಲೆಗೆ ಎಸೆದಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ. ಸಾವಿತ್ರಿ ನಾಲೆಗೆ ಎಸೆದ ಪಾಪಿ ತಾಯಿಯಾಗಿದ್ದು, ವಿನೋದ್ (6) ಮೊಸಳೆ ಬಾಯಿಗೆ ಸಿಲುಕಿ ಸಾವನ್ನಪ್ಪಿರುವ ದುರ್ದೈವಿ ಮಗು.
ಗಂಡ ರವಿಕುಮಾರ್ ಮೇಲಿನ ಸಿಟ್ಟಿಗೆ ಸಾವಿತ್ರಿ ಕೋಪದಲ್ಲಿ ಮಗುವನ್ನು ಮನೆಯ ಹತ್ತಿರವಿದ್ದ ಮೊಸಳೆಗಳಿದ್ದ ನಾಲೆಗೆ ಎಸೆದಿದ್ದಾಳೆ. ನಂತರ ಪಶ್ಚಾತ್ತಾಪದಿಂದ ತನ್ನ ತಪ್ಪಿನ ಅರಿವಾಗಿ ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾಳೆ. ನಂತರ ಬಾಲಕನಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಆದರೆ, ಮೊಸಳೆ ಬಾಯಿಗೆ ಸಿಲುಕಿ ಸಾವನ್ನಪ್ಪಿದ ಮಗುವಿನ ಶವ ಪತ್ತೆಯಾಗಿದೆ. ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.