ಮಂಡ್ಯ: ಲೋಕಸಭಾ ಚುನಾವಣೆ ಕಣ ರಂಗೇರಿದೆ. ಈ ಸಮಯದಲ್ಲಿ ಎಲ್ಲ ನಾಯಕರು ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಕಾಂಗ್ರೆಸ್ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರನ್ನು ಪ್ರೆಸಿಡೆಂಟ್ ಎಂದು, ಡಿಕೆಶಿಯನ್ನು ಡಿಸಿಎಂ ಎಂದು ಕರೆದಿದ್ದಾರೆ.
ಕಾಂಗ್ರೆಸ್ ನಲ್ಲಿ ಈಗಾಗಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಡಿಕೆಶಿ ಸಿಎಂ ಆಗುತ್ತಾರೆ. ಈ ಬದಲಾವಣೆ ಲೋಕಸಭೆ ಚುನಾವಣೆ ನಂತರ ನಡೆಯಲಿದೆ ಎಂಬ ಚರ್ಚೆ ಶುರುವಾಗಿತ್ತು. ಇದರ ಮಧ್ಯೆ ರಾಹುಲ್ ಗಾಂಧಿ ಈ ರೀತಿ ಸಂಬೋಧಿಸಿದ್ದಾರೆ.
ರಾಹುಲ್ ಭಾಷಣದ ವೇಳೆ ಮುದ್ರಿತ ಪ್ರತಿಯನ್ನು ನೋಡಿಕೊಂಡು ಭಾಷಣ ಮಾಡುತ್ತಿದ್ದರು. ಭಾಷಣ ಸಿದ್ಧಪಡಿಸುವವರೇ ಮಿಸ್ಟೇಕ್ ಮಾಡಿದ್ರೋ? ಅಥವಾ ಬೈ ಮಿಸ್ಟೇಕ್ ಆಗಿ ರಾಹುಲ್ ಗಾಂಧಿ ಹೀಗೆ ಹೇಳಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ಅನರ್ಥ ಆಗಿದೆ. ಇವರು ಭಾಷಣ ಮಾಡುವಾಗ ಇಂತಹ ಮೀಸ್ಟೇಕು ನಡೆಯುತ್ತಲೇ ಇರುತ್ತೆ.
ಸದ್ಯ ಹದಿನೆಂಟನೇ ಲೋಕಸಭಾ ಚುನಾವಣೆಯ ಪ್ರಚಾರದ ನಿಮಿತ್ತ ರಾಜ್ಯ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿಯವರು, ಮಂಡ್ಯ ಹಾಗೂ ಮಾಲೂರಿನಲ್ಲಿ ಮತಬೇಟೆ ನಡೆಸಿದರು. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಓಲೈಸಲು, ಹಲವಾರು ಭರವಸೆಗಳನ್ನು ನೀಡಿದರು.