ಬೆಂಗಳೂರು : ಕನ್ನಡದ ನಟ ಪ್ರಥಮ್ ಗೆ ದುಷ್ಕರ್ಮಿಗಳು ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಪ್ರಥಮ್ ಮೇಲೆ ರೌಡಿ ಗ್ಯಾಂಗ್ ಒಂದು ಅಟ್ಯಾಕ್ ಮಾಡಲು ಪ್ರಯತ್ನಿಸಿತ್ತು. ಈ ವೇಳೆ ರೌಡಿಗಳ ಜೊತೆ ರಕ್ಷಕ್ ಬುಲೆಟ್ ಸಹ ಇದ್ದ ಎಂದು ಲಾಯರ್ ಜಗದೀಶ್ ಜೊತೆ ಪ್ರಥಮ್ ದೂರವಾಣಿ ಕರೆ ವೇಳೆ ಹೇಳಿದ್ದಾರೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದಾಗ ಘಟನೆ ನಡೆದಿದೆ.
ಬೆದರಿಕೆ ಹಾಕಿದ ರೌಡಿಶೀಟರ್ ಬೇಕರಿ ರಘು ಮತ್ತು ಯಶಸ್ವಿನಿ ವಿರುದ್ಧ ದೂರು ನಟ ಪ್ರಥಮ್ ಈಗ ದೂರು ಸಲ್ಲಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಅಧಿಕ್ಷರಿಗೆ ಸಲ್ಲಿಸಿದ ದೂರಿನಲ್ಲಿ ಪ್ರಥಮ್ ಉಲ್ಲೇಖಿಸಿದ್ದಾರೆ.