ಭಾರತ ದೇಶವಲ್ಲ. ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ, ಒಂದು ಸಂಸ್ಕೃತಿ ಇರಬೇಕು. ತಮಿಳು ಅನ್ನುವುದು ಒಂದು ದೇಶ ಮತ್ತು ಒಂದು ರಾಷ್ಟ್ರ. ಮಲಯಾಳಂ ಎನ್ನುವುದ ಒಂದು ಭಾಷೆ, ಒಂದು ದೇಶ, ಒಂದು ರಾಷ್ಟ್ರ. ಕೇರಳಕ್ಕೆ ಹೋದರೆ ಅಲ್ಲೊಂದು ಸಂಸ್ಕೃತಿ ಇದೆ.ಒರಿಯಾ ಕೂಡಾ ಹಾಗೇನೇ…ಇದೆಲ್ಲ ದೇಶಗಳು ಸೇರಿ ಭಾರತ ಆಗುತ್ತದೆ. ಹೀಗಾಗಿ ಭಾರತ ಒಂದು ದೇಶವಲ್ಲ, ಅದು ಉಪಖಂಡ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಆರ್ ಎಸ್. ಭಾರತಿ ಅವರು ಹೇಳುವಂತೆ ಮಣಿಪುರದಲ್ಲಿ ಯಾಕೆ ನಾಯಿ ಮಾಂಸ ತಿನ್ನುತ್ತಾರೆ? ಹೌದು ಇದು ಸತ್ಯ ಅವರು ನಾಯಿ ಮಾಂಸ ತಿನ್ನುತ್ತಾರೆ. ಅದು ಅವರ ಸಂಸ್ಕೃತಿ. ಅದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವೂ ನಮ್ಮ ಮನಸ್ಸಿನಲ್ಲಿದೆ. ಹಾಗೆಯೇ ಕಾಶ್ಮೀರಕ್ಕೆ ಅದರದ್ದೇ ಆದ ಒಂದು ಸಂಸ್ಕೃತಿ ಇದೆ. ಅದನ್ನು ಒಪ್ಪಿಕೊಳ್ಳಿ. ಮಣಿಪುರದಲ್ಲಿ ಜನರು ನಾಯಿ ಮಾಂಸ ತಿನ್ನುತ್ತಾರೆ, ಅದನ್ನು ಒಪ್ಪಿಕೊಳ್ಳಿ. ಒಂದು ಸಮುದಾಯ ದನದ ಮಾಂಸ ತಿನ್ನುತ್ತದೆ ಎಂದರೆ ನಿಮಗೇನು ಸಮಸ್ಯೆ? ಅವರೇನು ನೀವೂ ತಿನ್ನಿ ಎಂದು ಒತ್ತಾಯ ಮಾಡಿದರಾ.? ಹೀಗಾಗಿ ವೈವಿಧ್ಯತೆಯಲ್ಲಿರುವ ಏಕತೆ ಇದು. ನಮ್ಮ ಮಧ್ಯೆ ನಾನಾ ಭಿನ್ನ ಸಂಸ್ಕೃತಿಗಳಿವೆ. ಅದನ್ನು ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ, ನಾವು ರಾಮನನ್ನೇ ಒಪ್ಪುವುದಿಲ್ಲ. ಹೀಗಾಗಿ ಜೈ ಶ್ರೀರಾಮ್ ಎನ್ನುವುದನ್ನು ಸ್ವೀಕರಿಸುವುದಿಲ್ಲ. ನಾವು ಭಾರತ್ ಮಾತಾ ಕೀ ಜೈ ಎನ್ನುವುದನ್ನು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.